ಅಮಿತ್ ಜೀ ಆರೋಗ್ಯವಾಗಿದ್ದಾರೆ: ಜಯಾ ಬಚ್ಚನ್

ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಆರೋಗ್ಯ ಈಗ ಚೆನ್ನಾಗಿದೆ ...
ಜಯಾ ಬಚ್ಚನ್-ಅಮಿತಾಬ್ ಬಚ್ಚನ್
ಜಯಾ ಬಚ್ಚನ್-ಅಮಿತಾಬ್ ಬಚ್ಚನ್
Updated on: 

ನವದೆಹಲಿ: ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಆರೋಗ್ಯ ಈಗ ಚೆನ್ನಾಗಿದೆ ಎಂದು ಅವರ ಪತ್ನಿ ಹಾಗೂ ರಾಜ್ಯಸಭಾ ಸದಸ್ಯೆ ಜಯಾ ಬಾಧುರಿ ಬಚ್ಚನ್ ಪ್ರತಿಕ್ರಿಯಿಸಿದ್ದಾರೆ.

ಅಮಿತ್ ಜೀಯವರ ಆರೋಗ್ಯ ಚೆನ್ನಾಗಿದೆ. ಅವರ ಬೆನ್ನು ಮತ್ತು ಕುತ್ತಿಗೆಗೆ ಗಾಯವಾಗಿದೆ. ಸ್ವಲ್ಪ ನೋವಿದೆ. ಆದರೆ ಒಟ್ಟಾರೆಯಾಗಿ ಅವರು ಆರೋಗ್ಯವಾಗಿದ್ದಾರೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

ರಾಜಸ್ತಾನದಲ್ಲಿ ಥಗ್ಸ್ ಆಫ್ ಹಿಂದೂಸ್ತಾನ್ ಚಿತ್ರದ ಚಿತ್ರೀಕರಣದಲ್ಲಿ ತೊಡಗಿದ್ದ ವೇಳೆ ಅಮಿತಾಬ್ ಬಚ್ಚನ್ ಅವರು ಅಸೌಖ್ಯಕ್ಕೀಡಾಗಿದ್ದರು. ಈ ಬಗ್ಗೆ ಇಂದು ಬೆಳಗ್ಗೆ ಸ್ವತಃ ಬಚ್ಚನ್ ಅವರೇ ಟ್ವೀಟ್ ಮಾಡಿದ್ದರು. ವೈದ್ಯರು ತಮ್ಮನ್ನು ನೋಡಿಕೊಳ್ಳುತ್ತಿದ್ದಾರೆ ಎಂದು ಬರೆದಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com