ಲಾಲೂ ಪ್ರಸಾದ್ ಯಾದವ್ ತತ್ವ ಸಿದ್ಧಾಂತದಿಂದ ಗೆಲುವು-ತೇಜಸ್ವಿಯಾದವ್

ಬಿಹಾರದಲ್ಲಿನ ಲೋಕಸಭಾ ಹಾಗೂ ವಿಧಾನಸಭಾ ಉಪಚುನಾವಣೆಯಲ್ಲಿ ಆರ್ ಜೆಡಿ ವರಿಷ್ಠ ಲಾಲೂ ಪ್ರಸಾದ್ ಯಾದವ್ ಅವರ ತತ್ವ ಸಿದ್ಧಾಂತದಿಂದ ಗೆಲುವು ಸಾಧಿಸಲಾಗಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ತೇಜಸ್ವಿ ಯಾದವ್ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಬಿಹಾರ : ಬಿಹಾರದಲ್ಲಿನ ಲೋಕಸಭಾ ಹಾಗೂ ವಿಧಾನಸಭಾ ಉಪಚುನಾವಣೆಯಲ್ಲಿ ಆರ್ ಜೆಡಿ ವರಿಷ್ಠ ಲಾಲೂ ಪ್ರಸಾದ್ ಯಾದವ್ ಅವರ  ತತ್ವ ಸಿದ್ಧಾಂತದಿಂದ  ಗೆಲುವು ಸಾಧಿಸಲಾಗಿದೆ ಎಂದು  ವಿಧಾನಸಭೆ ಪ್ರತಿಪಕ್ಷ ನಾಯಕ ತೇಜಸ್ವಿ ಯಾದವ್ ತಿಳಿಸಿದ್ದಾರೆ.

ಈ ಗೆಲುವಿಗೆ ಸಹಕರಿಸಿದ ಜನತೆಗೆ ತೇಜಸ್ವಿ ಯಾದವ್ ಕೃತಜ್ಞತೆ ಸಲ್ಲಿಸಿದ್ದು, ಲಾಲೂ ಪ್ರಸಾದ್ ಯಾದವ್ ತೆಗಳುವವರಿಗೆ ಲಾಲೂ ಒಬ್ಬರು ಆದರ್ಶಕರು ಎಂದು ಹೇಳುವುದಾಗಿ ತಿಳಿಸಿದ್ದು, ಮಾಜಿ ಮುಖ್ಯಮಂತ್ರಿ ಮಾಂಝಿ ಅವರಿಗೂ ಅಭಿನಂದನೆ ಸಲ್ಲಿಸಿದ್ದಾರೆ.

 ಈ ಮಧ್ಯೆ ರಾಷ್ಟ್ರೀಯ ಜನತಾ ದಳದ ಬಗ್ಗೆ ನಂಬಿಕೆ ಕಳೆದುಕೊಳ್ಳದೆ ಬೆಂಬಲಿಸಿದ ಎಲ್ಲರಿಗೂ ಕೃತಜ್ಞತೆ  ಸಲ್ಲಿಸುವುದಾಗಿ ತಿಳಿಸಿದ್ದು, ಈ ಗೆಲುವನ್ನು ಬಿಹಾರದ ಜನರಿಗಾಗಿ ಆರ್ಪಿಸುವುದಾಗಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com