ಭಾರತೀಯ ಸೇನೆಗೆ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಅಗತ್ಯತೆ ಇದ್ದು, ಶಸ್ತ್ರಾಸ್ತ್ರ ದಾಸ್ತಾನಿಗೆ ಆರ್ಥಿಕ ಕೊರತೆ ಇದೆ ಎಂಬ ವರದಿಗಳ ಹಿನ್ನಲೆಯಲ್ಲಿ ಭಾನುವಾರ ಮಾತನಾಡಿದ ಬಿಪಿನ್ ರಾವತ್, ಭಾರತೀಯ ಸೇನೆಗೆ ಶಸ್ತ್ರಾಸ್ತ್ರ ಕೊರತೆ ಇದೆ. ಆದರೆ ರಾತ್ರೋ ರಾತ್ರಿ ಅದನ್ನು ಸಂಪೂರ್ಣವಾಗಿ ತುಂಬಲು ಸಾಧ್ಯವಿಲ್ಲ. ಹೀಗಾಗಿ ಪ್ರಸ್ತುತ ಬಿಡುಗಡೆಯಾಗದಿರು ವರದಿಯಲ್ಲಿ ಹೊಸತೇನೂ ಇಲ್ಲ. ಕಳೆದ ಹಲವು ವರ್ಷಗಳಿಂದಲೂ ಇಂತಹ ವರದಿಗಳು ಪ್ರಸಾರವಾಗುತ್ತಿವೆ, ಆದರೆ ಭಾರತೀಯ ಸೇನೆಯ ಸೈನಿಕರು ತರಬೇತಿ ಪಡೆದ ಯೋಧರಾಗಿದ್ದು, ಯಾವುದೇ ರೀತಿಯ ಪರಿಸ್ಥಿತಿಯಲ್ಲೂ ತಮಗೆ ದೊರೆತ ಶಸ್ತ್ರಾಸ್ತ್ರಗಳಿಂದ ಹೋರಾಡಬಲ್ಲರು ಎಂದು ಹೇಳಿದ್ದಾರೆ.