ಸೋಮವಾರ ನಡೆದ ಅಲ್ಪಸಂಖ್ಯಾತರ ಸಮುದಾಯದ ಸಭೆಯಲ್ಲಿ ಮಾತನಾಡಿದ ಸಿಎಂ ಚಂದ್ರಬಾಬು ನಾಯ್ಡು ಅವರು, ಎನ್ ಡಿಎ ಮೈತ್ರಿಕೂಟದ ಸದಸ್ಯರಾಗಿ ನಾವು ರಾಜ್ಯಕ್ಕೆ ಕೇಂದ್ರದಿಂದ ಸೂಕ್ತ ನೆರವು ದೊರೆಯಲಿದೆ. ರಾಜ್ಯಕ್ಕೆ ವಿಶೇಷ ಸ್ಥಾನಮಾನ ಸಿಗಲಿದೆ ಎಂದು ಭಾವಿಸಿದ್ದೆವು. ಇದೇ ಕಾರಣಕ್ಕೆ ಕಳೆದ ನಾಲ್ಕು ವರ್ಷಗಳಿಂದ ಶಾಂತವಾಗಿದ್ದೆವು. ಆದರೆ ಈ ವರೆಗೂ ನಮಗೆ ಕೇಂದ್ರ ನೀಡಿದ್ದ ಭರವಸೆಗಳು ಹಾಗೆಯೇ ಇದ್ದು, ರಾಜ್ಯಕ್ಕೆ ಯಾವುದೇ ಪ್ರಯೋಜನವಾಗಿಲ್ಲ. ಕನಿಷ್ಠ ಪಕ್ಷ ಕೊನೆಯ ಬಜೆಟ್ ನಲ್ಲಾದರೂ ರಾಜ್ಯಕ್ಕೆ ಯಾವುದಾದರೂ ವಿಶೇಷ ಪ್ಯಾಕೇಜ್ ದೊರೆಯುವ ಆಸೆ ಇತ್ತು. ಅದೂ ಆಗಿಲ್ಲ ಎಂದು ನಾಯ್ಜು ಅಸಮಾಧಾನ ವ್ಯಕ್ತಪಡಿಸಿದ್ದಾರೆ.