ಕುತಂತ್ರದಿಂದ ಸತ್ಯ ತಿರುಚುವ ಮಾಧ್ಯಮಗಳ ವಿರುದ್ಧ ರಾಹುಲ್ ವಾಗ್ದಾಳಿ

ಕುತಂತ್ರದಿಂದ ಸತ್ಯವನ್ನು ತಿರುಚುವ ಮಾಧ್ಯಮಗಳ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಬುಧವಾರ....
ರಾಹುಲ್ ಗಾಂಧಿ
ರಾಹುಲ್ ಗಾಂಧಿ
Updated on: 
ನವದೆಹಲಿ: ಕುತಂತ್ರದಿಂದ ಸತ್ಯವನ್ನು ತಿರುಚುವ ಮಾಧ್ಯಮಗಳ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಬುಧವಾರ ತೀವ್ರ ವಾಗ್ದಾಳಿ ನಡೆಸಿದ್ದು, ಮಾಧ್ಯಮಗಳು ತಮ್ಮ ಜೀವನೋಪಾಯಕ್ಕಾಗಿ ನನ್ನ ವಿರುದ್ಧ ಸುಳ್ಳು ಸುದ್ದಿ ಪ್ರಸಾರ ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳ ಭ್ರಷ್ಟಾಚಾರದ ಕುರಿತು ಇತ್ತೀಚಿಗೆ 'ಕೋಬ್ರಾ ಪೋಸ್ಟ್' ನಡೆಸಿದ ಕುಟುಕು ಕಾರ್ಯಾಚರಣೆ ನಡೆಸಿದ್ದನ್ನು ಪ್ರಸ್ತಾಪಿಸಿದ ರಾಹುಲ್ ಗಾಂಧಿ, ನಕಲಿ ಕಥೆಗಳೊಂದಿಗೆ ನನ್ನ ವಿರುದ್ಧ ದ್ವೇಷಬಿತ್ತಲು ಯತ್ನಿಸುವವರನ್ನು ನಾನು ಎಂದಿಗೂ ಇಷ್ಟಪಡುವುದಿಲ್ಲ ಎಂದಿದ್ದಾರೆ.
ಸತ್ಯವನ್ನು ತಿರುಚುವುದೇ ಅವರ ವ್ಯವಹಾರ. ದ್ವೇಷವನ್ನು ಹಣಕ್ಕೆ ಮಾರಾಟ ಮಾಡುತ್ತಿರುವುದನ್ನು ಕೋಬ್ರಾ ಪೋಸ್ಟ್ ಬಹಿರಂಗಪಡಿಸಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಕೋಬ್ರಾ ಪೋಸ್ಟ್ ಕಾರ್ಯಾಚರಣೆ ಬಗ್ಗೆ ಪ್ರಮುಖ ಮಾಧ್ಯಮಗಳು ಮೌನವಾಗಿರುವುದನ್ನು ಗಮನಿಸಿದರೆ ಮಾಧ್ಯಮಗಳ ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತಿವೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಕಳೆದ ಸೋಮವಾರ ದೆಹಲಿ ಪ್ರೆಸ್ ಕ್ಲಬ್ ನಲ್ಲಿ ತಮ್ಮ ಕಾರ್ಯಾಚರಣೆಯ ವಿಡಿಯೋ ಪ್ರದರ್ಶನ ಏರ್ಪಡಿಸಿದ್ದ ಕೋಬ್ರಾ ಪೋಸ್ಟ್ , 17 ಮಾಧ್ಯಮ ಸಂಸ್ಥೆಗಳು ದೇಶದ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆ ಮತ್ತು 2019ರ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಹಣಕ್ಕಾಗಿ ಹಿಂದೂತ್ವ, ರಾಷ್ಟ್ರೀಯತೆ, ಕೋಮು ಧ್ರುವೀಕರಣ ಸಂಬಂಧಿಸಿದ ಸುತ್ತಿ ಬಿತ್ತಿರಿಸುವುದಕ್ಕೆ ಮುಂದಾಗಿವೆ.
ಚುನಾವಣೆ ಮೇಲೆ ಪ್ರಭಾವ ಬೀರುವ ಸುದ್ದಿಯನ್ನು ಬಿತ್ತರಿಸುವ ಪ್ರಸ್ತಾವನೆಯನ್ನು ಮಾಧ್ಯಮ ಸಂಸ್ಥೆಗಳ ಮುಂದೆ ಕುಟುಕು ಕಾರ್ಯಾಚರಣೆ ತಂಡ ಇಟ್ಟಿದ್ದು, ಅದಕ್ಕೆ ಒಪ್ಪುವ ಮಾಧ್ಯಮ ಸಂಸ್ಥೆಗಳು ಕನಿಷ್ಠ 6 ರಿಂದ 50 ಕೋಟಿ ರುಪಾಯಿಗೆ ಬೇಡಿಕೆ ಇಟ್ಟಿರುವುದು ಹಾಗೂ ತಾವು ಯಾವ ರೀತಿ ಸುದ್ದಿ ಮಾಡುತ್ತೇವೆ ಎಂಬುದನ್ನು ವಿವರಿಸಿರುವುದು ವಿಡೋಯದಲ್ಲಿದೆ.
ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರನ್ನು ಪಪ್ಪು, ಬುವಾ, ಬಬುವಾ ಮುಂತಾದ ಹೆಸರುಗಳಿಂದ ಗೇಲಿ ಮಾಡಿ, ಅವರ ವರ್ಚಸ್ಸು ಹಾಳು ಮಾಡುವಂಥ ಸುದ್ದಿಗಳನ್ನು ಬಿತ್ತರಿಸುವ 17 ಮಾಧ್ಯಮ ಸಂಸ್ಥೆಗಳ ತಂತ್ರವನ್ನು ಕೋಬ್ರಾ ಪೋಸ್ಟ್ ಕುಟುಕು ಕಾರ್ಯಾಚರಣೆ ಬಯಲು ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com