ನವದೆಹಲಿ: ಮುಖ್ಯಕಾರ್ಯದರ್ಶಿ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ವಿಚಾರಣೆ ನಡೆಸಲಿದ್ದಾರೆ.
ಪ್ರಕರಣ ಸಂಬಂಧ ಮೇ 18 ರಂದು ಕೇಜ್ರಿವಾಲ್ ಅವರ ವಿಚಾರಣೆ ನಡೆಯಲಿದೆ, ಈ ವರ್ಷದ ಆರಂಭದಲ್ಲಿ ಎಎಪಿ ಶಾಸಕರಾದ ಅಮನತುಲ್ಲಾಖಾನ್ ಮತ್ತು ಪ್ರಕಾಶ್ ಜರ್ವಾಲ್ ಅವರನ್ನು ವಿಚಾರಣೆಗೊಳಪಡಿಸಲಾಗಿತ್ತು,
ಫೆಬ್ರವರಿ 21 ರಂದು ಇಬ್ಬರು ಶಾಸಕರನ್ನು ಬಂಧಿಸಲಾಗಿತ್ತು, ಸಭೆಯ ವೇಳೆ ಮುಖ್ಯಕಾರ್ಯದರ್ಶಿ ಅಂಶು ಪ್ರಕಾಶ್ ಅವರ ಮೇಲೆ ಹಲ್ಲೆ ನಡೆಸಲಾಗಿತ್ತು. ನಂತರ ಇಬ್ಬರು ಶಾಸಕರನ್ನು 14 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿತ್ತು.