ವಾರಣಾಸಿ: ಅತ್ಯಾಚಾರ ಆರೋಪ, ಬಿಜೆಪಿ ಮುಖಂಡನ ಬಂಧನ

ಅತ್ಯಾಚಾರ ಆರೋಪ ಸಂಬಂಧ ವಾರಣಾಸಿಯ ಭದೋಹಿ ಜಿಲ್ಲಾ ಘಟಕದ ಮಾಜಿ ಬಿಜೆಪಿ ಅಧ್ಯಕ್ಷ ಕನ್ನಯ್ಯಾ ಲಾಲ್ ಮಿಶ್ರಾರನ್ನು ಸಿಗ್ರಾ ಪೊಲೀಸರು ಬಂಧಿಸಿದ್ದಾರೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ವಾರಣಾಸಿ: ಅತ್ಯಾಚಾರ ಆರೋಪ ಸಂಬಂಧ ವಾರಣಾಸಿಯ ಭದೋಹಿ ಜಿಲ್ಲಾ ಘಟಕದ ಮಾಜಿ ಬಿಜೆಪಿ ಅಧ್ಯಕ್ಷ ಕನ್ನಯ್ಯಾ ಲಾಲ್ ಮಿಶ್ರಾರನ್ನು ಸಿಗ್ರಾ ಪೊಲೀಸರು ಬಂಧಿಸಿದ್ದಾರೆ.
ಕೆಲಸ ಕೊಡಿಸುವ ಆಮಿಷ ತೋರಿ ತಮ್ಮ ಗೇಸ್ಟ್ ಹೌಸ್ ಗೆ ಕರೆಸಿಕೊಂಡು ಅತ್ಯಾಚಾರ ನಡೆಸಿದ್ದಾಗ ಮಹಿಳೆಯೊಬ್ಬರು ಸಿಗ್ರಾ ಪೊಲೀಸ್ ಠಾಣೆಗೆ ದೂರು ನೀಡಿದ್ದು ಈ ಆರೋಪ ಸಂಬಂಧ ಬಿಜೆಪಿ ಮುಖಂಡನನ್ನು ಬಂಧಿಸಲಾಗಿದೆ ಎಂದು ಇನ್ಸ್ ಪೆಕ್ಟರ್ ಸತೀಶ್ ಸಿಂಗ್ ತಿಳಿಸಿದ್ದಾರೆ. 
ಪರೇಡ್ ಕೋತಿ ಪ್ರದೇಶದ ಗೇಸ್ಟ್ ಹೌಸ್ ನಲ್ಲಿ ಕನ್ನಯ್ಯಾ ಲಾಲ್ ಮಿಶ್ರಾರನ್ನು ಬಂಧಿಸಲಾಗಿದೆ ಎಂದು ಸತೀಶ್ ಸಿಂಗ್ ತಿಳಿಸಿದ್ದಾರೆ. 
ಈ ಬಗ್ಗೆ ಪ್ರತಿಕ್ರಿಯಿಸಿರುವ ವಾರಣಾಸಿ ಬಿಜೆಪಿ ಪ್ರಾದೇಶಿಕ ಘಟಕದ ಅಧ್ಯಕ್ಷ ಮಹೇಶ್ ಚಂದ್ರ ಶ್ರೀವಾಸ್ತವ ಅವರು ಬಂಧಿತ ಕನ್ನಯ್ಯಾ ಲಾಲ್ ಅವರು ಈ ಹಿಂದೆ ಭದೋಹಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com