ಕಾಶ್ಮೀರ: ಉಗ್ರರಿಂದ ಸೇನಾ ಕ್ಯಾಂಪ್ ಮೇಲೆ ಗ್ರೆನೇಡ್ ದಾಳಿ

ಜಮ್ಮು ಮತ್ತು ಕಾಶ್ಮೀರದ ಕುಲ್ಗಮ್ ಜಿಲ್ಲೆಯಲ್ಲಿ ಸೇನಾ ಕ್ಯಾಂಪ್ ಮೇಲೆ ಉಗ್ರರು ಶುಕ್ರವಾರ ಗ್ರೆನೇಡ್ ದಾಳಿ ನಡೆಸಿದ್ದಾರೆ....
ದಾಳಿಯ ನಂತರ ಅಲರ್ಟ್ ಆಗಿರುವ ಭದ್ರತಾ ಸಿಬ್ಬಂದಿ
ದಾಳಿಯ ನಂತರ ಅಲರ್ಟ್ ಆಗಿರುವ ಭದ್ರತಾ ಸಿಬ್ಬಂದಿ
ಕುಲ್ಗಮ್: ಜಮ್ಮು ಮತ್ತು ಕಾಶ್ಮೀರದ ಕುಲ್ಗಮ್ ಜಿಲ್ಲೆಯಲ್ಲಿ ಸೇನಾ ಕ್ಯಾಂಪ್ ಮೇಲೆ ಉಗ್ರರು ಶುಕ್ರವಾರ ಗ್ರೆನೇಡ್ ದಾಳಿ ನಡೆಸಿದ್ದಾರೆ.
ಇಂದು 34 ರಾಷ್ಟ್ರೀಯ ರೈಫಲ್ಸ್ ನ ಕ್ಯಾಂಪ್ ಮೇಲೆ ಉಗ್ರರು ದಾಳಿ ನಡೆಸಿದ್ದು, ಎರಡು ತಿಂಗಳಲ್ಲಿ ನಡೆದ ಮೂರನೇ ದಾಳಿ ಇದಾಗಿದೆ.
ನಿನ್ನೆ ಜಮ್ಮುವಿನ ಬಿಸಿ ರಸ್ತೆಯಲ್ಲಿರುವ ಬಸ್ ನಿಲ್ದಾಣದ ಮೇಲೆ ನಡೆದ ಗ್ರೆನೇಡ್ ದಾಳಿಯಲ್ಲಿ ಇಬ್ಬರು ಪೊಲೀಸರು ಹಾಗೂ ಒಬ್ಬ ನಾಗರಿಕ ಗಾಯಗೊಂಡಿದ್ದರು.
ಮೇ 23ರಂದು ಕಾಶ್ಮೀರದ ಅನಂತ್ ಗಾನ್ ಜಿಲ್ಲೆಯ ಬಿಜ್ ಬೆಹರ್ ನಲ್ಲಿ ನಡೆದ ಗ್ರೆನೇಡ್ ದಾಳಿಯಲ್ಲಿ ಆರು ನಾಗರಿಕರು ಗಾಯಗೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com