ಎನ್ ಐಎಚ್ ಎಸ್ ಡಿ, ಭೋಪಾಲ್ ನ ವರದಿ ಶುಕ್ರವಾರ ಸಂಜೆ ವೇಳೆಗೆ ಪಶುಸಂಗೋಪನೆ ಇಲಾಖೆ ಅಧಿಕಾರಿಗಳ ಕೈಸೇರಿದೆ. ಪಶುಸಂಗೋಪನಾ ಇಲಾಖೆ ನಿರ್ದೇಶಕ ಡಾ. ಎನ್.ಎನ್. ಸಸಿ ಎಕ್ಸ್ ಪ್ರೆಸ್ ಜತೆ ಮಾತನಾಡಿ " ಮೂರು ಬಾವಲಿಗಳು, ನಾಲ್ಕು ಆಡುಗಳು, ಐದು ಕಾಡುಕೋಣ, ಮತ್ತು ಎಂಟು ಹಂದಗಳಿಂದ ಮಾದರಿಗಳನ್ನು ಸಂಗ್ರಹಿಸಲಾಗಿತ್ತು. ಮತ್ತು ಎಲ್ಲಾ ಋಣಾತ್ಮಕ ಫಲಿತಾಂಶ ಬಂದಿದೆ. ಬಾವಲಿಗಳ ದೇಹದ ದ್ರವ, ರಕ್ತದ ಮಾದರಿಯಲ್ಲಿ ಸಹ ವೈರಾಣು ಇರುವುದು ಪತ್ತೆಯಾಗಿಲ್ಲ " ಎಂದರು.