ಸಿಗರೇಟ್ ವಿಚಾರಕ್ಕೆ ಲಿಫ್ಟ್‌ನಲ್ಲಿ ಯುವತಿ ರದ್ಧಾಂತ, ಪೊಲೀಸರ ಮುಂದೆ ಬಟ್ಟೆ ಬಿಚ್ಚಿದ ಮಾಡೆಲ್, ವಿಡಿಯೋ ವೈರಲ್!

ಸಿಗರೇಟ್ ವಿಚಾರಕ್ಕೆ ಕೋಪಗೊಂಡ ಯುವತಿಯೋರ್ವಳು ಲಿಫ್ಟ್‌ನಲ್ಲಿ ರದ್ಧಾಂತ ಮಾಡಿದ್ದು ಪೊಲೀಸರ ಮುಂದೆ ಬಟ್ಟೆ ಬಿಚ್ಚಿ ಅಸಭ್ಯ ವರ್ತನೆ ತೋರಿರುವ ಘಟನೆ ಮುಂಬೈನ ಅಂಧೇರಿಯಲ್ಲಿ ನಡೆದಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮುಂಬೈ: ಸಿಗರೇಟ್ ವಿಚಾರಕ್ಕೆ ಕೋಪಗೊಂಡ ಯುವತಿಯೋರ್ವಳು ಲಿಫ್ಟ್‌ನಲ್ಲಿ ರದ್ಧಾಂತ ಮಾಡಿದ್ದು ಪೊಲೀಸರ ಮುಂದೆ ಬಟ್ಟೆ ಬಿಚ್ಚಿ ಅಸಭ್ಯ ವರ್ತನೆ ತೋರಿರುವ ಘಟನೆ ಮುಂಬೈನ ಅಂಧೇರಿಯಲ್ಲಿ ನಡೆದಿದೆ. 
ಯುವತಿ ಡೆಹರಾಡೂನ್ ನಿವಾಸಿಯಾಗಿದ್ದು ಮಾಡೆಲ್ ಹಾಗೂ ಬರಹಗಾರ್ತಿ ಎಂದು ತಿಳಿದುಬಂದಿದೆ. ಸೆಕ್ಯೂರಿಟಿ ಗಾರ್ಡ್ ಸಿಗರೇಟ್ ತಂದು ಕೊಡಲಿಲ್ಲ ಎಂಬ ಕಾರಣಕ್ಕೆ ಯುವತಿ ಈ ರೀತಿ ರದ್ಧಾಂತ ಮಾಡಿದ್ದಾಳೆ. 
ಅಕ್ಟೋಬರ್ 25ರ ರಾತ್ರಿ ಯುವತಿ ವಾಸ ಮಾಡುತ್ತಿದ್ದ ಅಪಾರ್ಟ್ ಮೆಂಟ್ ನ 15ನೇ ಮಹಡಿಯ ತನ್ನ ಫ್ಲಾಟ್ ನಲ್ಲಿ ಯದ್ವ ತದ್ವ ಮದ್ಯ ಸೇವಿಸಿದ್ದಾಳೆ. ನಂತರ ಫ್ಲಾಟ್ ನ ಸೆಕ್ಯೂರಿಟಿ ಗಾರ್ಡ್ ಗೆ ಸಿಗರೇಟ್ ತಂದುಕೊಂಡುವಂತೆ ಹೇಳಿದ್ದಾಳೆ. ಆಗ ಸೆಕ್ಯೂರಿಟಿ ಗಾರ್ಡ್ ಸಿಗರೇಟು ತಂದುಕೊಡಲಿಲ್ಲ ಎಂಬ ಕಾರಣಕ್ಕೆ ಆತನಿಗೆ ಹೊಡೆದು ಪೊಲೀಸರಿಗೆ ಕರೆ ಮಾಡಿದ್ದಾಳೆ. 
ಪೊಲೀಸರು ಬಂದ ನಂತರ ಠಾಣೆಗೂ ಬಂದು ದೂರು ನೀಡುವಂತೆ ಹೇಳಿದ್ದಾರೆ. ಇದಕ್ಕೆ ಕೋಪಗೊಂಡ ಯುವತಿ ನಾನು ಎಲ್ಲಿಗೂ ಬರುವುದಿಲ್ಲ ಎಂದು ಲಿಫ್ಟ್ ನಲ್ಲಿ ತನ್ನ ಫ್ಲಾಟ್ ಗೆ ಹೋಗಲು ಮುಂದಾಗಿದ್ದಾಳೆ. ಈ ವೇಳೆ ಸೆಕ್ಯೂರಿಟಿ ಗಾರ್ಡ್ ಆಕೆ ಮೇಲೆ ಹೋಗಲು ಬಿಡಲಿಲ್ಲ. ಇದರಿಂದ ಆಕ್ರೋಶಗೊಂಡ ಆಕೆ ತಾನು ತೊಟ್ಟಿದ್ದ ಬಟ್ಟೆಯನ್ನು ಬಿಚ್ಚಿದ್ದಾಳೆ. ಇದನ್ನು ವ್ಯಕ್ತಿಯೊಬ್ಬರು ವಿಡಿಯೋ ಮಾಡಿದ್ದು ವಿಡಿಯೋ ವೈರಲ್ ಆಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com