ಚತ್ತೀಸ್ ಗಢದ ಈ ಗ್ರಾಮದಲ್ಲಿರುವುದು ನಾಲ್ಕೇ ನಾಲ್ಕು ಮತದಾರರು!

ಚತ್ತೀಸ್ ಗಢ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದ್ದು, ಮತದಾನ ಪ್ರಮಾಣವನ್ನು ಹೆಚ್ಚಿಸುವುದರತ್ತ ಆಯೋಗ ಗಮನಹರಿಸುತ್ತಿದೆ.
ಚತ್ತೀಸ್ ಗಢದ ಈ ಗ್ರಾಮದಲ್ಲಿರುವುದು ನಾಲ್ಕೇ ಮತದಾರರು!
ಚತ್ತೀಸ್ ಗಢದ ಈ ಗ್ರಾಮದಲ್ಲಿರುವುದು ನಾಲ್ಕೇ ಮತದಾರರು!
Updated on: 
ರಾಯ್ಪುರ: ಚತ್ತೀಸ್ ಗಢ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದ್ದು, ಮತದಾನ ಪ್ರಮಾಣವನ್ನು ಹೆಚ್ಚಿಸುವುದರತ್ತ ಆಯೋಗ ಗಮನ ಹರಿಸುತ್ತಿದೆ. ಮತದಾರರ ಸಂಖ್ಯೆ ಒಂದಂಕಿ ಇದ್ದರೂ ಚುನಾವಣಾ ಆಯೋಗ ಮತದಾನ ಜಾಗೃತಿ ಮೂಡಿಸುತ್ತಿದೆ. 
ಜನಜಾಗೃತಿ ಮೂಡಿಸುತ್ತಿರುವ ಚುನಾವಣಾ ಆಯೋಗಕ್ಕೆ ಚತ್ತೀಸ್ ಗಢದ ಗ್ರಾಮದಲ್ಲಿ ಕೇವಲ ನಾಲ್ಕೇ ನಾಲ್ಕು ಮತದಾರರು ಇರುವುದು ಕಂಡುಬಂದಿದೆ. ಶೆರಾಂದಂದ್ ಗ್ರಾಮದ ಪೋಲಿಂಗ್ ಬೂತ್ ನಂಬರ್ 143 ರಲ್ಲಿ ಕೇವಲ 4 ಜನ ಮತದಾರರಿವುದಷ್ಟೇ ಪತ್ತೆಯಾಗಿದ್ದು, ಈ ಪೈಕಿ ಮೂವರು ಒಂದೇ ಕುಟುಂಬದವರಾಗಿದ್ದಾರೆ. 
ಭರತ್ಪುರ್-ಸೋನ್ಹಾಟ್ ವಿಧಾನಸಭಾ ಕ್ಷೇತ್ರದಲ್ಲಿರುವ ನಾಲ್ಕು ಮತದಾರಿಗೆ ಮತದಾನ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಪೋಲಿಂಗ್ ಪಾರ್ಟಿ ಚುನಾವಣೆಗೂ ಒಂದು ದಿನ ಮುಂಚಿತವಾಗಿ ಆ ಪ್ರದೇಶಕ್ಕೆ ತೆರಳಲಿದ್ದಾರೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿ ಎನ್ ಕೆ ದುಗ್ಗಾ ಹೇಳಿದ್ದಾರೆ. 
ಈ ಪ್ರದೇಶಕ್ಕೆ ತಲುಪುವ ಮಾರ್ಗವೂ ದುರ್ಗಮವಾಗಿದ್ದು, ಚುನಾವಣಾ ಅಧಿಕಾರಿಗಳ ತಂಡ ಬೆಟ್ಟ ಗುಡ್ಡ ಹಾಗೂ ನದಿಗಳನ್ನು ದಾಟಬೇಕಿದೆ. ಮುಖ್ಯ ರಸ್ತೆಯಿಂದ 15 ಕಿಮೀ ದೂರದಲ್ಲಿ ಈ ಗ್ರಾಮವಿದೆ.  ನ.12 ಕ್ಕೆ ಚತ್ತೀಸ್ ಗಢ ವಿಧಾನಸಭೆಗೆ ಚುನಾವಣೆ ನಡೆಯಲಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com