ವೇಣು ಮಾಧವ್
ದೇಶ
ತೆಲಂಗಾಣ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ನಟ ವೇಣು ಮಾಧವ್ ಸ್ಪರ್ಧೆ
ಖ್ಯಾತ ತೆಲುಗು ನಟ ವೇಣು ಮಾಧವ್ ಅವರು ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಕೋಡದ್ ಕ್ಷೇತ್ರದಿಂದ ...
ಹೈದರಾಬಾದ್: ಖ್ಯಾತ ತೆಲುಗು ನಟ ವೇಣು ಮಾಧವ್ ಅವರು ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಕೋಡದ್ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.
ಕೋಡದ್ ನಲ್ಲಿ ಶಿಕ್ಷಣ ಪಡೆದಿರುವ ವೇಣು ಮಾಧವ್ ಅವರಿಗೆ ಅದೇ ತವರೂರಾಗಿ ಮಾರ್ಪಟ್ಟಿದ್ದು, ಈಗ ಅಲ್ಲಿಂದಲೇ ಚುನಾವಣಾ ಅಖಾಡಕ್ಕಿಳಿಯಲಿದ್ದಾರೆ.
ಮಿಮಿಕ್ರಿ ಕಲಾವಿದನಾಗಿ ವೃತ್ತಿ ಜೀವನ ಆರಂಭಿಸಿದ ವೇಣು ಮಾಧವ್ ಅವರು ಹಲವು ಟಿಡಿಪಿ ಚುನಾವಣಾ ರ್ಯಾಲಿಗಳಲ್ಲಿ ಭಾಗವಹಿಸಿ ಜನರನ್ನು ರಂಜಿಸಿದ್ದಾರೆ.
ಟಾಲಿವುಡ್ ನಲ್ಲಿ ಅತ್ಯಂತ ಜನಪ್ರಿಯ ಹಾಸ್ಯ ಕಲಾವಿದರಾಗಿರುವ ವೇಣು ಮಾಧವ್ ಅವರು ಎನ್ ಟಿಆರ್, ಚಿರಂಜೀವಿ ಹಾಗೂ ಪ್ರಭಾಸ್ ಅವರ ಚಿತ್ರಗಳು ಸೇರಿದಂತೆ ಸುಮಾರು 150ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

