ಮಟನ್ ಸಾಂಬರ್ ಮಾಡಲು ವಿಳಂಬ ಮಾಡಿದ ಪತ್ನಿ: ಕ್ರೋಧಗೊಂಡ ಅಪ್ಪನಿಂದ 4 ವರ್ಷದ ಮಗಳ ಹತ್ಯೆ!

ಮಟನ್ ಸಾಂಬಾರ್ ಮಾಡಲು ಪತ್ನಿ ತಡಮಾಡಿದ ಕಾರಣ ಕ್ರೋಧಗೊಂಡ ಪತಿ ತನ್ನ 4 ವರ್ಷಗ ಮಗಳನ್ನು ನೆಲಕ್ಕೆ ಬಡಿದು ಕೊಂದಿರುವ ಅಮಾನುಷ ಘಟನೆ ಬಿಹಾರದಲ್ಲಿ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಪಾಟ್ನಾ: ಮಟನ್ ಸಾಂಬಾರ್ ಮಾಡಲು ಪತ್ನಿ ತಡಮಾಡಿದ ಕಾರಣ ಕ್ರೋಧಗೊಂಡ ಪತಿ ತನ್ನ 4 ವರ್ಷಗ ಮಗಳನ್ನು ನೆಲಕ್ಕೆ ಬಡಿದು ಕೊಂದಿರುವ ಅಮಾನುಷ ಘಟನೆ ಬಿಹಾರದಲ್ಲಿ ನಡೆದಿದೆ,
ಫಕ್ರಿಟೋಲಿ ಗ್ರಾಮದ ಶಂಬು ಲಾಲ್ ಶರ್ಮಾ ತನ್ನ 4 ವರ್ಷದ ಮಗಳಾದ ಶಾಲು ಕುಮಾರಿಯನ್ನು ಬಡಿದುಕೊಂದಿರುವ ಪಾಪಿ. ಗಾಯಗೊಂಡ ಮಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು, ಆದರೆ ಅಷ್ಟರಲ್ಲಾಗಲೇ ಮಗು ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದಾರೆ., ಈ ಹಿನ್ನೆಲೆಯಲ್ಲಿ ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಹೆಂಡತಿ ತನಗಾಗಿ ಮಟನ್ ಸಾಂಬರ್ ಬೇಗ ಮಾಡಲಿಲ್ಲ ಎಂಬ ಕಾರಣಕ್ಕೆ ಪತ್ನಿ ರಾಜಕುಮಾರಿ ದೇವಿ ಜೊತೆ ವಾಗ್ವಾದಕ್ಕಿಳಿದಿದ್ದ, ಇಬ್ಬರ ನಡುವೆ ಜಗಳವಾಗುತ್ತಿತ್ತು. ಈ ವೇಳೆ ಪಕ್ಕದಲ್ಲೇ ಆಟವಾಡುತ್ತಿದ್ದ 4 ವರ್ಷದ ಮಗಳ ಕುತ್ತಿಗೆ ಹಿಡಿದೆಳೆದು ನಾಲ್ಕೈದು ಬಾರಿ ನೆಲಕ್ಕೆ ಬಡಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜ್ಞಾಹೀನಳಾಗಿ ಬಿದ್ದಿದ್ದ ಮಗಳನ್ನು ಕೂಡಲೇ ಶರ್ಮ ಆಸ್ಪತ್ರೆಗೆ ಕರೆದೊಯ್ದಿದ್ದಾನೆ ಅಷ್ಚರಲ್ಲಾಗಲೇ ಮಗು ಸಾವನ್ನಪ್ಪಿತ್ತು, 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com