ಮಧ್ಯ ಪ್ರದೇಶ: ಬಸ್ ಮತ್ತು ಶಾಲಾ ವಾಹನದ ನಡುವೆ ಡಿಕ್ಕಿ; 7 ಶಾಲಾ ಮಕ್ಕಳು ಸೇರಿದಂತೆ 8 ಮಂದಿ ದುರ್ಮರಣ

ಶಾಲಾ ವಾಹನ ಮತ್ತು ಬಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಶಾಲಾ ಮಕ್ಕಳು, ಚಾಲಕ ಸೇರಿದಂತೆ ಒಟ್ಟು 8 ಮಂದಿ ದಾರುಣ ಸಾವನ್ನಪ್ಪಿದ್ದಾರೆ....
ಅಪಘಾತಗೊಂಡ ಬಸ್
ಅಪಘಾತಗೊಂಡ ಬಸ್
ಭೂಪಾಲ್: ಶಾಲಾ ವಾಹನ ಮತ್ತು ಬಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಶಾಲಾ ಮಕ್ಕಳು, ಚಾಲಕ ಸೇರಿದಂತೆ ಒಟ್ಟು 8 ಮಂದಿ ದಾರುಣ ಸಾವನ್ನಪ್ಪಿದ್ದಾರೆ.
ಬಿರ್ಸಿಗಾಪುರದಲ್ಲಿ ನಡೆದ ಅಪಘಾತದಲ್ಲಿ ಲಕ್ಕಿ ಎಂಬ ಖಾಸಗಿ ಶಾಲೆಯ 7 ವಿದ್ಯಾರ್ಥಿಗಳು ಹಾಗೂ ಚಾಲಕ ಮೃತ ಪಟ್ಟಿದ್ದಾರೆ. ಮೃತ ಮಕ್ಕಳೆಲ್ಲಾ ಶಾಲಾ ವಾಹನದಲ್ಲಿ ಪ್ರಯಾಣಿಸುತ್ತಿದ್ದರು. 
ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮಕ್ಕಳ ಸಾವಿಗೆ ಸಂತಾಪ ಸೂಚಿಸಿದ್ದಾರೆ, ಶಾಲಾ ಆಡಳಿತ ಮಂಡಳಿ ಶಾಲಾ ವ್ಯಾನ್ ಚಾಲಕರಿಗೆ ಅಗತ್ಯವಾದ ಮಾರ್ಗ ಸೂಚಿ ನೀಡಬೇಕೆಂದು ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com