ಅರ್ಜೆಂಟೈನಾ: ವಿಶ್ವದ ಆರೋಗ್ಯ, ಕ್ಷೇಮ, ಶಾಂತಿಗಾಗಿ ಭಾರತ ನೀಡಿದ ಉಡುಗೊರೆ ಯೋಗ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶುಕ್ರವಾರ ಹೇಳಿದ್ದಾರೆ.
ಯೋಗ ಫಾರ್ ಪೀಸ್ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ವಿಶ್ವದ ಆರೋಗ್ಯ, ಕ್ಷೇಮ, ಶಾಂತಿಗಾಗಿ ಭಾರತ ನೀಡಿದ ಉಡುಗೊರೆ ಯೋಗವಾಗಿದೆ. ವ್ಯಾಯಾಮ ವ್ಯಕ್ತಿಯ ಆರೋಗ್ಯ ಹಾಗೂ ಮಿದುಳನ್ನು ಉತ್ತಮವಾಗಿರುವಂತೆ ನೋಡಿಕೊಳ್ಳುತ್ತದೆ ಎಂದು ಹೇಳಿದ್ದಾರೆ.
ಇದೇ ವೇಳೆ ಕಾರ್ಯಕ್ರಮ ಆಯೋಜಿಸಿದ್ದಕ್ಕೆ ಆರ್ಟ್ ಆಫ್ ಲಿವಿಂಗ್'ಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಯೋಗ ಎಂದರೆ ಭಾರತ ಸೇರ್ಪಡೆ ಮತ್ತು ಅರ್ಜೆಂಟೈನಾ ಎಂದರ ಆತ್ಮಾಧ್ಯಾತ್ಮಿಕ ಬಂಧ ಎಂದು ತಿಳಿಸಿದ್ದಾರ.
ಕಾರ್ಯಕ್ರಮದಲ್ಲಿ 600ಕ್ಕೂ ಹೆಚ್ಚು ಜನರು ಯೋಗ ಅಭ್ಯಾಸ ಮಾಡಿದ್ದು, ಕಾರ್ಯಕ್ರಮದಲ್ಲಿ ಅರ್ಜೆಂಟೈನಾದ ಪ್ರಸಿದ್ಧ ಗಾಯಕ ಪಟ್ರಿಶ್ಯಾ ಸೊಸಾ ಕೂಡ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಎಲ್ಲರೂ ಓಂ ನಮಃ ಶಿವಾಯ ಪಠಿಸಿದ್ದಾರೆ.