ಮುಂಬಯಿ: ಛತ್ರಪತಿ ಶಿವಾಜಿ ಸ್ಮಾರಕ ಸ್ಥಳದ ಬದಲಾವಣೆ ಸಾಧ್ಯವಿಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸ್ಪಷ್ಟ ಪಡಿಸಿದ್ದಾರೆ.
ಶಿವಾಜಿ ಸ್ಮಾರಕವನ್ನು ಈಗ ಇರುವ ಸ್ಥಳದಿಂದ ಮುಂಬಯಿ ಕರಾವಳಿಯ ಅರೇಬಿಯನ್ ಸಮುದ್ರದ ಪ್ರದೇಶಕ್ಕೆ ಸ್ಥಳಾಂತರಿಸಬೇಕು ಎಂದು ಪ್ರಸ್ತಾವನೆ ಬಂದಿತ್ತು,
ಸದ್ಯ ಇರುವ ಸ್ಥಳದಿಂದ ಶಿವಾಜಿ ಸ್ಮಾರಕವನ್ನು ಸ್ಥಳಾಂತರಗೊಳಿಸಲು ಯಾವುದೇ ಕಾರಣವಿಲ್ಲ, ಸ್ಮಾರಕವನ್ನು ಅದೇ ಸ್ಥಳದಲ್ಲಿ ಅದೇ ಶೇಪ್ ನಲ್ಲಿ ಇರಲಿದೆ, ಈಗಾಗಲೇ ಕೆಲಸ ಆರಂಭವಾಗಲಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಜಾಗದ ಸ್ಥಳಾಂತರ ಮಾಡುವುದಿಲ್ಲ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕಳೆದ ವಾರ ನಡೆದ ಅಪಘಾತ ನಡೆದದ್ದು ದುರಾದೃಷ್ಟ, ಹೀಗಾಗಲೇ ಪ್ರಾಥಮಿಕ ತನಿಖೆ ನಡೆಸಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.