ಯುಪಿ ಸಿಎಂ ಯೋಗಿ ವಿರುದ್ಧ ದೂರು ನೀಡಿದ್ದ ವ್ಯಕ್ತಿ ಅತ್ಯಾಚಾರ ಆರೋಪದಡಿ ಬಂಧನ

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ವಿರುದ್ಧ ದೂರು ನೀಡಿದ್ದ 62 ವರ್ಷ ಪರ್ವೇಜ್ ಪರ್ವಾಜ್....
ಯೋಗಿ ಆದಿತ್ಯನಾಥ್
ಯೋಗಿ ಆದಿತ್ಯನಾಥ್
ಗೋರಖ್ ಪುರ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ವಿರುದ್ಧ ದೂರು ನೀಡಿದ್ದ 62 ವರ್ಷ ಪರ್ವೇಜ್ ಪರ್ವಾಜ್ ಅವರನ್ನು ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಗುರುವಾರ ಬಂಧಿಸಲಾಗಿದೆ.
ಕಳೆದ ಜೂನ್ 3ರಂದು ಪರ್ವಾಜ್ ಹಾಗೂ ಮತ್ತೊಬ್ಬ ಅಪರಿಚತ ವ್ಯಕ್ತಿ ಮೆಹಮೂದ್ ಅಲಿಯಾಸ್ ಜುಮ್ಮಾನ್ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿರುವುದಾಗಿ ಪೊಲೀಸ್ ಅಧೀಕ್ಷಕ ವಿನಯ್ ಸಿಂಗ್ ಅವರು ಹೇಳಿದ್ದಾರೆ.
ಮಹಿಳೆ ಜುಮ್ಮಾನ್ ಬಳಿ ಚಿಕಿತ್ಸೆಗೆ ಬಂದಾಗ ಅತ್ಯಾಚಾರ ನಡೆದಿದ್ದು, ವೈದ್ಯಕೀಯ ಪರೀಕ್ಷೆಯಲ್ಲಿ ಅತ್ಯಾಚಾರ ಸಾಬೀತಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಸಂಬಂಧ ರಾಜ್‌ಘಾಟ್‌ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು,  ಬುಧವಾರ ಪರ್ವೇಜ್‌ರನ್ನು ಬಂಧಿಸಿದ್ದು ಮೆಹಮೂದ್ ಅಲಿಯಾಸ್‌ ಜುಮ್ಮಾನ್( 60 )ಗಾಗಿ ಹುಡುಕಾಟ ನಡೆಸುತ್ತಿದ್ದೇವೆ ಎಂದು ವಿನಯ್ ಸಿಂಗ್ ಮಾಹಿತಿ ನೀಡಿದ್ದಾರೆ. 
ಕಣ್ಣಿನ ವೈದ್ಯರಾಗಿದ್ದ ಮಹಮೂದ್‌ ಬಳಿ ಚಿಕಿತ್ಸೆಗೆ ಹೋಗಿದ್ದಾಗ ತನ್ನ ಮೇಲೆ ಮಹಮೂದ್ ಹಾಗೂ ಪರ್ವೇಜ್ ಅತ್ಯಾಚಾರ ನಡೆಸಿದರು ಎಂದು ಸಂತ್ರಸ್ಥೆ ಮಹಿಳೆ ದೂರು ನೀಡಿದ್ದರು.
ಪರ್ವಾಜ್ ಅವರು ಪ್ರಚೋದನಕಾರಿ ಭಾಷಣಕ್ಕೆ ಸಂಬಂಧಿಸಿದಂತೆ ಯೋಗಿ ಆದಿತ್ಯನಾಥ್ ಅವರ ವಿರುದ್ಧ  2007ರಿಂದ ವಿವಿಧ ಕೋರ್ಟ್ ಗಳಲ್ಲಿ ಕೇಸ್ ದಾಖಲಿಸಿದ್ದರು. ಪರ್ವಾಜ್ ದೂರಿನ ಆಧಾರದ ಮೇಲೆ ಯೋಗಿ ಆದಿತ್ಯನಾಥ್ ಗೋರಖ್‌ಪುರ ಸಂಸದರಾಗಿದ್ದ ವೇಳೆ ಅವರ ವಿರುದ್ಧ ದ್ವೇಷ ಭಾಷಣದ ಎಫ್‌ಐಆರ್‌ ದಾಖಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com