ಪ್ರಧಾನಿ ಮೋದಿಯಿಂದ ನೌಕಾಪಡೆ ಅಧಿಕಾರಿ ಅಭಿಲಾಷ್ ಟಾಮಿ ಆರೋಗ್ಯ ವಿಚಾರಣೆ

: ಗೋಲ್ಡನ್ ಗ್ಲೋಬ್ ರೇಸ್ ನಲ್ಲಿ ಭಾಗಿಯಾಗಿದ್ದ ನೌಕಾಪಡೆಯ ಅಧಿಕಾರಿ ಅಭಿಲಾಷ್ ಟಾಮಿ ಆರೋಗ್ಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಾಹಿತಿ ಪಡೆದಿದ್ದಾರೆ,..
ಅಭಿಲಾಷ್ ಟಾಮಿ
ಅಭಿಲಾಷ್ ಟಾಮಿ
ನವದೆಹಲಿ: ಗೋಲ್ಡನ್ ಗ್ಲೋಬ್ ರೇಸ್ ನಲ್ಲಿ ಭಾಗಿಯಾಗಿದ್ದ ನೌಕಾಪಡೆಯ ಅಧಿಕಾರಿ ಅಭಿಲಾಷ್ ಟಾಮಿ ಆರೋಗ್ಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಾಹಿತಿ ಪಡೆದಿದ್ದಾರೆ,
ಈ ಬಗ್ಗೆ ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ಪ್ರಧಾನಿ ಮೋದಿ,  ನೌಕಾಪಡೆಯ ಅಧಿಕಾರಿ ಅಭಿಲಾಷ್ ಶೀಘ್ರವೇ ಗುಣಮುಖರಾಗಲೆಂದು ಪ್ರಾರ್ಥಿಸಿದ್ದಾರೆ.
ಅಭಿಲಾಷ್ ಟಾಮಿ ಅವರ ಜೊತೆ ಮಾತನಾಡಿದ್ದೇನೆ, ಅವರ ಆರೋಗ್ಯ ಸದ್ಯ ಸ್ಥಿರವಾಗಿದೆ, ಅವರ ಶೀಘ್ರ ಚೇತರಿಕೆಗಾಗಿ ಪ್ರತಿಯೊಬ್ಬ ಭಾರತೀಯನು ಪ್ರಾರ್ಥಿಸಬೇಕು, ಅವರ ರಕ್ಷಣೆ ಮಾಡಿದ ತಂಡಕ್ಕೂ ನನ್ನ ಅಭಿನಂದನೆಗಳು, ಅಭಿಲಾಷ್ ಜೊತೆಗೆ ಸಭೆ ನಡೆಸಿದ್ದು ನನ್ನ ಮನಸ್ಸಿನಲ್ಲಿದೆ ಎಂದು ಬರೆದಿದ್ದಾರೆ.
ರೌಂಡ್‌ ದ ವರ್ಲ್ಡ್ ಸೋಲೊ ರೇಸ್‌ನಲ್ಲಿ ಪಾಲ್ಗೊಂಡಿದ್ದ ಭಾರತೀಯ ನೌಕಾಪಡೆಯ ಅಧಿಕಾರಿ ಅಭಿಲಾಷ್ ಟಾಮಿ ಅವರನ್ನು ಸೋಮವಾರ ರಕ್ಷಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com