ಧನುಷ್ ಫಿರಂಗಿ ಬೊಪೋರ್ಸ್ ಫಿರಂಗಿಗಿಂತಲೂ ಹೆಚ್ಚು ಶಕ್ತಿಶಾಲಿಯಾಗಿದ್ದು, ದಾಳಿ ನಡೆಸುವ ವ್ಯಾಪ್ತಿ 11 ಕಿ.ಮೀ ವರೆಗೂ ಇದೆ. ಸಿಕ್ಕಿಂ, ಲೇಹ್ ನಂತಹ ಅತಿ ಶೀತ ಪ್ರದೇಶ ಹಾಗೂ ರಾಜಸ್ಥಾನದ ಪೊಖ್ರಾನ್, ಒಡಿಶಾ, ಬಾಲಾಸೋರ್ ನಂತಹ ಅತಿ ಬಿಸಿಲಿರುವ ಪ್ರದೇಶಗಳಲ್ಲೂ ಧನುಷ್ ಫಿರಂಗಿಯನ್ನು ಪರೀಕ್ಷಿಸಲಾಗಿದ್ದು, ಯಶಸ್ವಿ ಕಾರ್ಯಚರಣೆ ಬಳಿಕ ಸೇನೆಗೆ ಸೇರ್ಪಡೆಗೊಳಿಸಲಾಗುತ್ತಿದೆ.