ಹೀನ ಕೃತ್ಯ: ಮಗಳ ಮೇಲೆ ತಂದೆಯಿಂದ ನಿರಂತರ ಅತ್ಯಾಚಾರ, ತಡೆಯಬೇಕಿದ್ದ ತಾಯಿಯಿಂದಲೇ ಕುಮ್ಮಕ್ಕು!

ಹೆತ್ತ ಮಕ್ಕಳಿಗೆ ಉಜ್ವಲ ಭವಿಷ್ಯ ಸೃಷ್ಟಿಸಬೇಕು ಎಂದು ಎಲ್ಲಾ ತಂದೆ-ತಾಯಿಯರು ಯೋಚಿಸುತ್ತಾರೆ. ಆದರೆ ಇಲ್ಲಿ ಮಗಳ ಮೇಲೆ ಅತ್ಯಾಚಾರ ನಡೆಸಲು ಗಂಡನಿಗೆ ಹೆಂಡತಿಯೇ ಸಹಕಾರ ನೀಡುತ್ತಿದ್ದ...
ಅತ್ಯಾಚಾರ
ಅತ್ಯಾಚಾರ
Updated on: 

ಲಖನೌ: ಹೆತ್ತ ಮಕ್ಕಳಿಗೆ ಉಜ್ವಲ ಭವಿಷ್ಯ ಸೃಷ್ಟಿಸಬೇಕು ಎಂದು ಎಲ್ಲಾ ತಂದೆ-ತಾಯಿಯರು ಯೋಚಿಸುತ್ತಾರೆ. ಆದರೆ ಇಲ್ಲಿ ಮಗಳ ಮೇಲೆ ಅತ್ಯಾಚಾರ ನಡೆಸಲು ಗಂಡನಿಗೆ ಹೆಂಡತಿಯೇ ಸಹಕಾರ ನೀಡುತ್ತಿದ್ದದ್ದು ಅಲ್ಲದೆ ಮಗಳಿಗೆ ಗರ್ಭನಿರೋಧಕ ಮಾತ್ರೆಗಳನ್ನು ಕೊಡುತ್ತಿದ್ದ ಹೀನ ಕೃತ್ಯ ವರದಿಯಾಗಿದೆ.

ಕಳೆದ 10 ವರ್ಷಗಳಿಂದ ತಂದೆಯೇ ಮಗಳ ಮೇಲೆ ನಿರಂತರ ಅತ್ಯಾಚಾರ ನಡೆಸುತ್ತಾ ಬಂದಿದ್ದಾನೆ. ಇದಕ್ಕೆ ಸಂತ್ರಸ್ತೆಯ ತಾಯಿ ಕುಮ್ಮಕ್ಕು ನೀಡುತ್ತಿದ್ದು ಮಗಳು ಗರ್ಭಿಣಿಯಾಗದಂತೆ ತಡೆಯಲು ಗರ್ಭನಿರೋಧಕ ಮಾತ್ರೆಗಳನ್ನು ಕೊಡುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. 

 44 ವರ್ಷದ ತಂದೆ 22 ವರ್ಷದ ಹಿರಿಯ ಮಗಳ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸುತ್ತಾ ಬಂದಿದ್ದಾನೆ. ಅದೇ ಅಲ್ಲದೆ ಇತ್ತೀಚೆಗೆ ಕಿರಿಯ ಮಗಳ ಮೇಲೆ ಅತ್ಯಾಚಾರ ಮಾಡಿದ್ದರಿಂದ ಹಿರಿಯ ಮಗಳು ಧೈರ್ಯ ಮಾಡಿ ಪೊಲೀಸರಿಗೆ ವಿಷಯ ತಿಳಿಸಿದ್ದಾಳೆ. 

ಈ ಸಂಬಂಧ ಆತನ ವಿರುದ್ಧ ಪೋಕ್ಸೋ ಕಾಯ್ದೆಯಡಿಯಲ್ಲಿ ದೂರು ದಾಖಲಿಸಲಾಗಿದೆ. ಇನ್ನು 42 ವರ್ಷದ ತಾಯಿಯನ್ನು ಬಂಧಿಸಿದ್ದು ತಂದೆ ತಲೆಮರೆಸಿಕೊಂಡಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com