ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ: ಐಸಿಯುನಲ್ಲೇ ಯುವಕನಿಗೆ ಬಲವಂತದ ಮದುವೆ ಮಾಡಿಸಿದ ಗ್ರಾಮಸ್ಥರು

ಮೋಸ ಮಾಡಿ ಪರಾರಿಯಾಗುತ್ತಿದ್ದ ಯುವಕನನ್ನು ಹಿಡಿದು ಕರೆತಂದು ಆತ್ಮಹತ್ಯೆಗೆ ಯತ್ನಿಸಿ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯೊಂದಿಗೆ ಗ್ರಾಮಸ್ಥರು ವಿವಾಹ ಮಾಡಿಸಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ಪುಣೆ: ಮೋಸ ಮಾಡಿ ಪರಾರಿಯಾಗುತ್ತಿದ್ದ ಯುವಕನನ್ನು ಹಿಡಿದು ಕರೆತಂದು ಆತ್ಮಹತ್ಯೆಗೆ ಯತ್ನಿಸಿ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯೊಂದಿಗೆ ಗ್ರಾಮಸ್ಥರು ವಿವಾಹ ಮಾಡಿಸಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. 

ಸೂರಜ್ ಎಂಬ ಯುವಕ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದ. ಕೆಲ ದಿನಗಳ ಬಳಿಕ ಜಾತಿ ಕಾರಣ ನೀಡಿ ಮಹಿಳೆಗೆ ಮೋಸ ಮಾಡಿದ್ದ. ಇದರಿಂದ ನೊಂದಿದ್ದ ಮಹಿಳೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ ನಡೆಸಿದ್ದರು. 

ಬಳಿಕ ಊರಿನ ಗ್ರಾಮಸ್ಥರು ಆರೋಪಿ ಸೂರಜ್ ನನ್ನು ಹಿಡಿದು ಕರೆತಂದು ಐಸಿಯುವಿನಲ್ಲೇ ಇಬ್ಬರ ವಿವಾಹ ನೆರವೇರಿಸಿದ್ದಾರೆ. ವಿವಾಹವಾದ ಬಳಿಕ ಸೂರಜ್ ಪರಾರಿಯಾಗಿದ್ದಾನೆ. 

ಇದೀಗ ಮಹಿಳೆ ಪೊಲೀಸರಿಗೆ ಐಪಿಸಿ ಸೆಕ್ಷನ್ 376 ಅಡಿಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸೂರಜ್ ಗಾಗಿ ಹುಡುಕಾಟ ಆರಂಭಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com