ಸಿಎಎ ಪ್ರತಿಭಟನೆ ಟ್ವೀಟ್ ಗೆ 'ಲೈಕ್' ಮಾಡಿದ್ದು ಯಾಕೆ?; ಅಕ್ಷಯ್ ನೀಡಿದ ಸ್ಪಷ್ಟನೆ ಇಷ್ಟೆ...

ದೆಹಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಸಿಎಎ ವಿರುದ್ಧ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದ ವಿಡಿಯೋ ಒಂದಕ್ಕೆ ಲೈಕ್ ಮಾಡಿದ್ದ ಬಾಲಿವುಡ್ ನಟ ಅಕ್ಷಯ್ ಕುಮಾರ್ ಭಾರಿ ಟೀಕೆಗೆ ಗುರಿಯಾಗಿದ್ದರು. 
ಸಿಎಎ ಪ್ರತಿಭಟನೆ ಟ್ವೀಟ್ ಗೆ 'ಲೈಕ್' ಮಾಡಿದ್ದು ಕಣ್ತಪ್ಪಿನಿಂದ; ಅಕ್ಷಯ್ ಸ್ಪಷ್ಟನೆ
ಸಿಎಎ ಪ್ರತಿಭಟನೆ ಟ್ವೀಟ್ ಗೆ 'ಲೈಕ್' ಮಾಡಿದ್ದು ಕಣ್ತಪ್ಪಿನಿಂದ; ಅಕ್ಷಯ್ ಸ್ಪಷ್ಟನೆ
Updated on

ನವದೆಹಲಿ: ದೆಹಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಸಿಎಎ ವಿರುದ್ಧ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದ ವಿಡಿಯೋ ಒಂದಕ್ಕೆ ಲೈಕ್ ಮಾಡಿದ್ದ ಬಾಲಿವುಡ್ ನಟ ಅಕ್ಷಯ್ ಕುಮಾರ್ ಭಾರಿ ಟೀಕೆಗೆ ಗುರಿಯಾಗಿದ್ದರು. 
  
ಈ ಕುರಿತು ಸೋಮವಾರ ಸ್ಪಷ್ಟೀಕರಣ ನೀಡಿರುವ ಅಕ್ಷಯ್, ಅದೂ ಕಣ್ತಪ್ಪಿನಿಂದ ನೀಡಿದ ಲೈಕ್ ಎಂದು ಸ್ಪಷ್ಟಪಡಿಸಿದ್ದಾರೆ.  ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳ ಟ್ವೀಟ್ ಗೆ ಲೈಕ್ ಮಾಡಿರುವುದು ಕಣ್ತಪ್ಪಿನಿಂದ. ನಾನು ಟ್ವೀಟ್ ಗಳನ್ನು ನೋಡುತ್ತಿದ್ದಾಗ ತಪ್ಪಿ ಲೈಕ್ ಬಟನ್ ಒತ್ತಿದ್ದು, ತಕ್ಷಣ ಅದನ್ನು ಅನ್ ಲೈಕ್ ಮಾಡಿದ್ದೇನೆ. ನಾನು ಇಂತಹ ಕೃತ್ಯಗಳನ್ನು ಬೆಂಬಲಿಸುವುದು ಸಾಧ್ಯವೇ ಇಲ್ಲ’ ಎಂದಿದ್ದಾರೆ. 

ಜಾಮಿಯಾ ವಿವಿ ಆವರಣದಲ್ಲಿ ಭಾನುವಾರ ರಾತ್ರಿ ವಿದ್ಯಾರ್ಥಿಗಳ ಪ್ರತಿಭಟನೆ ವಿಪರೀತಕ್ಕೆ ಹೋಗಿದ್ದು, ಗುಂಪಿನ ಜನರು ಪೊಲೀಸರ ಮೇಲೆ ಕಲ್ಲು ಎಸೆದಿದ್ದು, ಆರು ಪೊಲೀಸರು ಗಾಯಗೊಂಡಿದ್ದಾರೆ. ಕೇಂದ್ರ ಸರ್ಕಾರ ಮುಸ್ಲಿಮರನ್ನು ಗುರಿಯಾಗಿಸಿ ಇಂತಹ ಕಾಯ್ದೆಗಳನ್ನು ಜಾರಿಗೆ ತರುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com