ಕಾಶ್ಮೀರದಲ್ಲಿ ಕಂಪಿಸಿದ ಭೂಮಿ, 5.6 ತೀವ್ರತೆ ದಾಖಲು

ಮಂಗಳವಾರ ರಾತ್ರಿ ಜಮ್ಮು ಮತ್ತು ಕಾಶ್ಮೀರದ ಕೆಲ ಭಾಗಗಳಲ್ಲಿ 5.6 ರಷ್ಟು ತೀವ್ರತೆಯ ಭೂಕಂಒಅನ ಸಂಭವಿಸಿದ
ಕಾಶ್ಮೀರದಲ್ಲಿ ಕಂಪಿಸಿದ ಭೂಮಿ, 5.6 ತೀವ್ರತೆ ದಾಖಲು
ಕಾಶ್ಮೀರದಲ್ಲಿ ಕಂಪಿಸಿದ ಭೂಮಿ, 5.6 ತೀವ್ರತೆ ದಾಖಲು
Updated on: 
ಶ್ರೀನಗರ: ಮಂಗಳವಾರ ರಾತ್ರಿ ಜಮ್ಮು ಮತ್ತು ಕಾಶ್ಮೀರದ ಕೆಲ ಭಾಗಗಳಲ್ಲಿ  5.6 ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದ ವರದಿಯಾಗಿದೆ. ರಾತ್ರಿ ಸುಮಾರು  10.17ಕ್ಕೆ ಈ ಭೂಕಂಪ ಅನುಭವಕ್ಕೆ ಬಂದಿದೆ.
ಭೂಕಂಪದ ಕಾರಣ ಜನ ಭಯಭೀತರಾಗಿ ತಮ್ಮ ತಮ್ಮ ಮನೆಗಳಿಂದ ಹೊರಗೋಡಿಬಂದಿದ್ದಾರೆ. ಕಾಶ್ಮೀರದ ವಾಯುವ್ಯ ಭಾಗದಲ್ಲಿ ಶ್ರೀನಗರದಿಂದ 118 ಕಿಮೀ. ದೂರದಲ್ಲಿ ಭೂಕಂಪದ ಕೇಂದ್ರವಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಭೂಕಂಪದ ಕಾರಣ ಯಾವುದೇ ಆಸ್ತಿ ಹಾನಿ, ಸಾವು, ನೋವು ಸಂಭವಿಸಿದ ವರದಿಯಾಗಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com