ನವದೆಹಲಿ: ದೆಹಲಿಯ ಐಷಾರಾಮಿ ಬಂಗಲೆಗಳಿರುವ ಪ್ರದೇಶದಲ್ಲಿ ಮನೆ ಖರೀದಿಸಲು ಹಣ ಹೊಂದಿರುವ ಶ್ರೀಮಂತರು ಮುಂದೆ ಬರುತ್ತಾರೆ, ಇದನ್ನು ಬಂಡವಾಳವಾಗಿಸಿಕೊಂಡ ಖತರ್ನಾಕ್ ಜೋಡಿಯೊಂದು ಒಂದೇ ಮನೆಯನ್ನು ಐವರಿಗೆ ಮಾರಾಟ
ಮಾಡಿ ಹಣ ಪೀಕುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಲಂಡನ್ ನಲ್ಲಿ ಎಂಬಿಎ ಪದವಿ ಪೂರೈಸಿರುವ ಅನುರಾಧ ಕಪೂರ್ ಹಾಗೂ ಆಕೆಯ ತಾಯಿ, ಮೊಲ್ಲಿ ಇಬ್ಬರು ಸೇರಿ ತಮ್ಮ ಗ್ರೇಟರ್ ಕೈಲಾಶ್ ಹೌಸ್ ನ ದಾಖಲೆಗಳನ್ನು ಫೋರ್ಜರಿ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಐದು ಜನಕ್ಕೆ ವಂಚಿಸಿದ ಇವರು ಹಣ ದೆಹಲಿಯ ಐಷಾರಾಮಿ ಹೋಟೆಲ್ ಗಳಲ್ಲಿ ವಾಸ್ತವ್ಯ ಹೂಡಿ, ಲಂಡನ್, ಅಮೆರಿಕಾ, ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ಪ್ರವಾಸ ಮಾಡಿ ಮಜಾ ಮಾಡುತ್ತಿದ್ದರು.
ಇಬ್ಬರನ್ನು ಬಂಧಿಸಿರುವ ದೆಹಲಿ ಪೊಲೀಸರು ಭಾರತೀಯ ದಂಡ ಸಂಹಿತೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಪ್ರಕರ ದಾಖಲಾದಾಗಿನಿಂದ ಇಬ್ಬರು ನಾಪತ್ತೆಯಾಗಿದ್ದರು, ನಂತರ ಇಬ್ಬರನ್ನು ಸೂರ್ಯ ಹೊಟೇಲ್ ನಲ್ಲಿ ಬಂಧಿಸಲಾಗಿದೆ.
ದೆಹಲಿ ವಿವಿಯಲ್ಲಿ ಪದವಿ ಪೂರೈಸಿದ, ಅನುರಾಧ ಲಂಡನ್ ನಲ್ಲಿ ಎಂಬಿಎ ಪದವಿ ಪಡೆದಿದ್ದಳು, ಬೇಗ ಹಣ ಸಂಪಾದಿಸಲು ಹಾಗೂ ಐಷಾರಾಮಿ ಜೀವನ ನಡೆಸಲು ಈ ದಾರಿ ಹಿಡಿದಿದ್ದಾಗಿ ಹೇಳಿದ್ದಾರೆ, ಡಿಫೆನ್ಸ್ ಕಾಲೋನಿ ಮತ್ತು ಕೈಲಾಸ್ ಪೊಲೀಸ್ ಸ್ಟೇಷನ್ ಗಳಲ್ಲಿ ದೂರು ದಾಖಲಾಗಿದೆ,
ಗೋವಾದಲ್ಲಿ ನಡೆದ ಪ್ರಕರಣದಲ್ಲಿ ಅನುರಾಧವೊಂದರಲ್ಲಿ ಜಾಮೀನು ಪಡೆದು ಹೊರ ಬಂದಿದ್ದಳು, ಕ್ಯಾಸಿನೋ ಏಜೆಂಟ್ ಕೊಲೆ ಪ್ರಕರಣದಲ್ಲಿ ದೆಹಲಿ ಮಹಿಳೆಯನ್ನು ಬಂಧಿಸಲಾಗಿತ್ತು.