ಇಂಡೇನ್ ಎಲ್ ಪಿಜಿ ವಿತರಣೆ ಸಂಸ್ಥೆಯಿಂದ ಲಕ್ಷಾಂತರ ಆಧಾರ್ ಸಂಖ್ಯೆ ಸೋರಿಕೆ; ಫ್ರಾನ್ಸ್ ಸಂಶೋಧಕ

ಭಾರತೀಯ ತೈಲ ನಿಗಮದ ನಿಯಂತ್ರಣದಲ್ಲಿರುವ ಇಂಡೇನ್ ಎಲ್ ಪಿಜಿಯ ಲಕ್ಷಾಂತರ ಗ್ರಾಹಕರು ಮತ್ತು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಭಾರತೀಯ ತೈಲ ನಿಗಮದ ನಿಯಂತ್ರಣದಲ್ಲಿರುವ ಇಂಡೇನ್ ಎಲ್ ಪಿಜಿಯ ಲಕ್ಷಾಂತರ ಗ್ರಾಹಕರು ಮತ್ತು ವಿತರಕರ ಆಧಾರ್ ಸಂಖ್ಯೆಗಳು ಬಹಿರಂಗವಾಗಿದ್ದು ಭದ್ರತೆಯಲ್ಲಿ ಕೊರತೆ ಕಂಡುಬರುತ್ತಿದೆ ಎಂದು ಫ್ರಾನ್ಸ್ ದೇಶದ ಸಂಶೋಧಕರೊಬ್ಬರು ಹೇಳುತ್ತಾರೆ.

ಎಲ್ಲಿಯಟ್ ಅಲ್ಡರ್ಸನ್ ಎಂಬ ಸಂಶೋಧಕ ಆನ್ ಲೈನ್ ಮೂಲಕ ಇಂಡೇನ್ ಗ್ಯಾಸ್ ಸಿಲಿಂಡರ್ ವಿತರಕರು ಮತ್ತು ಗ್ರಾಹಕರ ಆಧಾರ್ ಸಂಖ್ಯೆ ಸೋರಿಕೆಯಾಗಿರುವುದನ್ನು ತಮ್ಮ ಬ್ಲಾಗ್ ನಲ್ಲಿ ಬರೆದಿದ್ದು ಸುಮಾರು 67 ಲಕ್ಷ ಮಿಲಿಯನ್ ಗ್ರಾಹಕರು ಮತ್ತು ವಿತರಕರ ಆಧಾರ್ ಸಂಖ್ಯೆ ಸೋರಿಕೆಯಾಗಿವೆ ಎಂದಿದ್ದಾರೆ.

ಸ್ಥಳೀಯ ವಿತರಕರ ಪೋರ್ಟಲ್ ನಲ್ಲಿ ನಿಖರತೆ ಕೊರತೆಯಿಂದಾಗಿ ಇಂಡೇನ್ ಗ್ರಾಹಕರ ಹೆಸರು, ವಿಳಾಸ ಮತ್ತು ಆಧಾರ್ ಸಂಖ್ಯೆಗಳು ಬಹಿರಂಗವಾಗಿವೆ ಎಂದು ಹೇಳಿದ್ದಾರೆ.
ಈ ಬಗ್ಗೆ ಇಂಡೇನ್ ವಿತರಣಾ ಸಂಸ್ಥೆ ಮತ್ತು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com