ಈ ಬಗ್ಗೆ ದೆಹಲಿಯಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೇನಾಧಿಕಾರಿ ಜುಲ್ಫಿಕರ್ ಹಸನ್ ಹಾಗೂ ಕನ್ವಾಲ್ ಜೀತ್ ಸಿಂಗ್ ಧಿಲ್ಲಾನ್ ಅವರು, ಉಗ್ರ ದಾಳಿಯ ಹಿಂದೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಕೈವಾಡವಿದೆ ಎಂದು ಹೇಳಿದ್ದಾರೆ. 'ಪುಲ್ವಾಮ ಉಗ್ರ ದಾಳಿ ಘಟನಾ ಪ್ರದೇಶದಲ್ಲಿ ನಮಗೆ ಸಾಕಷ್ಟು ಸಾಕ್ಷ್ಯಾಧಾರಗಳು ದೊರೆತಿವೆ. ಈ ಸಾಕ್ಷ್ಯಗಳೇ ದಾಳಿಯಲ್ಲಿ ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್ಐನ ಪಾತ್ರದ ಕುರಿತು ಮಾಹಿತಿ ನೀಡುತ್ತಿದೆ. ಆದರೆ ಈ ಸಾಕ್ಷ್ಯಾಧಾರಗಳನ್ನು ನಾವು ಮಾಧ್ಯಮಗಳೊಂದಿಗೆ ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು ಜುಲ್ಫಿಕರ್ ಹಸನ್ ಹೇಳಿದರು.