ಪಾಕ್ ಒಳಗೆ ನುಗ್ಗಿ ವೈಮಾನಿಕ ದಾಳಿ ನಡೆಸಲು ಐಎಎಫ್ ಮಿರಾಜ್-2000 ನ್ನೇ ಆಯ್ಕೆ ಮಾಡಿದ್ದೇಕೆ ಗೊತ್ತೇ?

ಪುಲ್ವಾಮ ದಾಳಿಯ ನಂತರ ಭಾರತ ಎಲ್ಒಸಿ ದಾಟಿ ಪಾಕಿಸ್ತಾನದ ಮೇಲೆ ದಾಳಿ ನಡೆಸಿದ್ದು, ಹಿಂದಿನ ಸರ್ಜಿಕಲ್ ಸ್ಟ್ರೈಕ್ ಗಿಂತಲೂ ತೀವ್ರವಾಗಿ ಈ ಬಾರಿ ವೈಮಾನಿಕ ಸರ್ಜಿಕಲ್ ಸ್ಟ್ರೈಕ್ ನಡೆಸಿದೆ. ಈ ಮೂಲಕ
ಪಾಕ್ ಒಳಗೆ ನುಗ್ಗಿ ವೈಮಾನಿಕ ದಾಳಿ ನಡೆಸಲು ಐಎಎಫ್ ಮಿರಾಜ್-2000 ನ್ನೇ ಆಯ್ಕೆ ಮಾಡಿದ್ದೇಕೆ ಗೊತ್ತೇ?
ಪಾಕ್ ಒಳಗೆ ನುಗ್ಗಿ ವೈಮಾನಿಕ ದಾಳಿ ನಡೆಸಲು ಐಎಎಫ್ ಮಿರಾಜ್-2000 ನ್ನೇ ಆಯ್ಕೆ ಮಾಡಿದ್ದೇಕೆ ಗೊತ್ತೇ?
Updated on
ನವದೆಹಲಿ: ಪುಲ್ವಾಮ ದಾಳಿಯ ನಂತರ ಭಾರತ ಎಲ್ಒಸಿ ದಾಟಿ ಪಾಕಿಸ್ತಾನದ ಮೇಲೆ ದಾಳಿ ನಡೆಸಿದ್ದು, ಹಿಂದಿನ ಸರ್ಜಿಕಲ್ ಸ್ಟ್ರೈಕ್ ಗಿಂತಲೂ ತೀವ್ರವಾಗಿ ಈ ಬಾರಿ ವೈಮಾನಿಕ ಸರ್ಜಿಕಲ್ ಸ್ಟ್ರೈಕ್ ನಡೆಸಿದೆ. ಈ ಮೂಲಕ ಭಾರತ ಪಾಕಿಸ್ತಾನಕ್ಕೆ ತಡೆಯಲಾಗದ ಹೊಡೆತ ನೀಡಿದೆ. 
ಪಾಕಿಸ್ತಾನದ ಉಗ್ರರ ಅಡಗುದಾಣಗಳನ್ನು ಭಸ್ಮ ಮಾಡಲು ಭಾರತದ ವಾಯುಪಡೆ ಆಯ್ಕೆ ಮಾಡಿಕೊಂಡಿದ್ದು ಮಿರಾಜ್-2000 ಫೈಟರ್ ಜೆಟ್, ಎಲ್ಲಾ ರೀತಿಯ ವಾತಾವರಣದಲ್ಲೂ ಪ್ರತಿಬಂಧಕ ಸಾಮರ್ಥ್ಯ ಹೊಂದಿರುವ ಮಿರಾಜ್-2000 ಫೈಟರ್ ಜೆಟ್, ಕಾರ್ಗಿಲ್ ಯುದ್ಧದ ವಿಜಯದಲ್ಲೂ ಮಹತ್ವದ ಪಾತ್ರ ವಹಿಸಿತ್ತು. ಥೇಲ್ಸ್ RDY 2 ರೇಡಾರ್ ನ್ನು ಹೊಂದಿರುವ ಮಿರಾಜ್-2000 ಟಾರ್ಗೆಟ್ ನ್ನು ಸ್ವಯಂ ಚಾಲಿತವಾಗಿ ಟ್ರಾಕ್ ಮಾಡುವ ಸಾಮರ್ಥ್ಯ ಹೊಂದಿದೆ.
ಸುಮಾರು 500 ಮೀಟರ್ ಗಳ ರೇಡಿಯಸ್ ವ್ಯಾಪ್ತಿಯಲ್ಲಿ ನಿಖರವಾಗಿ ಲೇಸರ್ ಗೈಡೆಡ್ ಬಾಂಬಿಂಗ್ ಮಾಡಬಹುದಾಗಿದೆ. ಜೊತೆಗೆ ಟಾರ್ಗೆಟ್ ಗಳನ್ನು ಮ್ಯಾಪಿಂಗ್ ಮಾಡುವುದಕ್ಕೆ ಡೋಪ್ಲರ್ ಬೀಮ್-ಶಾರ್ಪೆನಿಂಗ್ ತಂತ್ರಜ್ಞಾನ ಹಾಗೂ ಹಾರಾಟದ ಸಮಯದಲ್ಲಿ ಪ್ರತಿ ಗಂಟೆಗೆ 900 ಕಿಮೀ ವೇಗದಲ್ಲಿ ಹಾರುವ ಸಾಮರ್ಥ್ಯ ಹೊಂದಿದ್ದು, ಎಂಬಿಡಿಎ ಅರ್ಮಾತ್ ರಾಡಾರ್ ಕ್ಷಿಪಣಿ ಪ್ರತಿಬಂಧಕ ಸಾಮರ್ಥ್ಯ ಹೊಂದಿರುವ ಕಾರಣಕ್ಕಾಗಿ ಮಿರಾಜ್-2000 ನ್ನು ವೈಮಾನಿಕ ದಾಳಿಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ಇದರ ಜೊತೆಗೆ ಟಾರ್ಗೆಟ್ ಗಳನ್ನು ನಿಖರವಾಗಿ ಫಿಕ್ಸ್ ಮಾಡಲು ಹಿರೋನ್ ಸರ್ವೇಕ್ಷಣಾ ವಿಮಾನವೂ ಸಹ ಸಾಥ್ ನೀಡಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com