ಹೌದು.. ಗಡಿ ನಿಯಂತ್ರಣಾ ರೇಖೆಯ ಬಳಿ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ನೆಲೆಗಳ ಮೇಲೆ ಭಾರತದ ವಾಯು ಸೇನೆ ಇಂದು ಮುಂಜಾನೆ ದಾಳಿ ಮಾಡುತ್ತಿದ್ದಾಗ, 'ಐ ಇನ್ ದಿ ಸ್ಕೈ' ಎಂದೇ ಖ್ಯಾತವಾಗಿರುವ ಎರಡು ಡ್ರೋಣ್ ಗಳು ಪ್ರಮುಖ ಪಾತ್ರ ವಹಿಸಿವೆ. ಒಂದು, ಡಿಫೆನ್ಸ್ ರಿಸರ್ಚ್ ಆ್ಯಂಡ್ ಡೆವಲಪ್ಮೆಂಟ್ ಆರ್ಗನೈಸೇಷನ್ (ಡಿಆರ್‌ಡಿಓ) ದೇಶೀಯವಾಗಿ ನಿರ್ಮಿಸಿರುವ 'ನೇತ್ರಾ' ಎಂಬ ಏರ್ ಬಾರ್ನ್ ಅರ್ಲಿ ವಾರ್ನಿಂಗ್ ಆ್ಯಂಡ್ ಕಂಟ್ರೋಲ್ ಸಿಸ್ಟಂ, ಮತ್ತು ಎರಡನೇಯದು, ಇಸ್ರೇಲ್ ನಿರ್ಮಿತ ಹೆರಾನ್ ಎಂಬ ಡ್ರೋಣ್. ಇವೆರೆಡರ ಸಹಾಯದಿಂದ ಭಾರತೀಯ ವಾಯು ಸೇನೆ ಯಶಸ್ವಿಯಾಗಿ ಮತ್ತು ಯಾವುದೇ ಪ್ರತಿದಾಳಿಗೆ ಅವಕಾಶವಿಲ್ಲದಂತೆ ದಾಳಿ ಮಾಡಿ ವಾಪಸ್ ಬಂದಿದೆ.