ಭಾರತೀಯ ವಾಯುಪಡೆಯ ಮಿಗ್ 21 ಪತನ; ಇಬ್ಬರು ಪೈಲಟ್ ಸಾವು

ಜಮ್ಮು ಕಾಶ್ಮೀರದ ಬುದ್ಗಾಮ್ ನಲ್ಲಿ ವಾಯುಸೇನೆಯ ವಿಮಾನ ಪತನಗೊಂಡು ಇಬ್ಬರು ಪೈಲಟ್ ಹುತಾತ್ಮರಾಗಿದ್ದಾರೆ...
ಮಿಗ್-21 ವಿಮಾನ ಪತನ
ಮಿಗ್-21 ವಿಮಾನ ಪತನ
ಜಮ್ಮು ಕಾಶ್ಮೀರ: ಜಮ್ಮು ಕಾಶ್ಮೀರದ ಬುದ್ಗಾಮ್ ನಲ್ಲಿ ವಾಯುಸೇನೆಯ ವಿಮಾನ ಪತನಗೊಂಡು ಇಬ್ಬರು ಪೈಲಟ್ ಹುತಾತ್ಮರಾಗಿದ್ದಾರೆ.
ಬುಧವಾರ ಬೆಳಗ್ಗೆ ಬುದ್ಗಾಮ್ ನಲ್ಲಿ ಗಸ್ತು ತಿರುಗುವ ವೇಳೆ ಈ ದುರಂತ ಸಂಭವಿಸಿದೆ. ಸ್ಥಳಕ್ಕೆ ಆಗಮಿಸಿರುವ  ತಂತ್ರಜ್ಞರ ತಂಡ ಪರಿಶೀಲಿಸುತ್ತಿದೆ, ಇಬ್ಬರ ದೇಹಗಳು ಪತ್ತೆಯಾಗಿವೆ ಎಂದು ಬುದ್ಗಾಮ್ ಎಸ್ ಎಸ್ ಪಿ ತಿಳಿಸಿದ್ದಾರೆ.
ಬದ್ಗಾಮ್ ಜಿಲ್ಲೆಯ ಗರೇಂದ್ ಕಲಾನ್ ಗ್ರಾಮದಲ್ಲಿ  ಬೆಳಗ್ಗೆ 10 ಗಂಟೆ 5 ನಿಮಿಷಕ್ಕೆ ವಿಮಾನ ಪತನಗೊಂಡಿತ್ತು, ಕೆಳಗೆ ಬಿದ್ದ ಜೆಟ್ 2ಭಾಗವಾಯಿತು, ಕೂಡಲೇ ಬೆಂಕಿ ಹೊತ್ತಿಕೊಂಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com