ಪ್ರಧಾನಿ ವಿರುದ್ಧ ಸಂದರ್ಶನದಲ್ಲಿ ಕಿಡಿ ಕಾರಿರುವ ಉದ್ಧವ್ ಠಾಕ್ರೆ, ಬಿಜೆಪಿಗೆ ಈಗ ಸ್ಪಷ್ಟ ಬಹುಮತ ಇದೆ. ಈಗ ರಾಮ ಮಂದಿರ ನಿರ್ಮಾಣ ಮಾಡದೇ ಇದ್ದಲ್ಲಿ ಬೇರೆ ಯಾವಗ ನಿರ್ಮಿಸಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಗುಜರಾತ್ ನಲ್ಲಿ ಮೋದಿ ಸರ್ಕಾರ ಸರ್ದಾರ್ ಪಟೇಲರ ಪ್ರತಿಮೆ ನಿರ್ಮಾಣ ಮಾಡಿದೆ. ಆದರೆ ರಾಮ ಮಂದಿರದ ವಿಷಯದಲ್ಲಿ ಸರ್ದಾರ್ ಪಟೇಲರಂತೆ ಧೈರ್ಯವನ್ನು ತೋರಿಸಲು ಮೋದಿ ಸರ್ಕಾರಕ್ಕೆ ಸಾಧ್ಯವಾಗಿಲ್ಲ, ಒಂದು ವೇಳೆ ಸುಪ್ರೀಂ ಕೋರ್ಟ್ ರಾಮ ಮಂದಿರ ನಿರ್ಮಾಣದ ವಿಷಯದಲ್ಲಿ ನಿರ್ಧಾರ ತೆಗೆದುಕೊಳ್ಳಬೇಕೆಂದಾದರೆ 1992 ರಲ್ಲಿ ಕರಸೇವಕರ ಬಲಿದಾನ ಏಕೆ ಆಯಿತು ಎಂದು ಉದ್ಧವ್ ಠಾಕ್ರೆ ಸಾಮ್ನಾದಲ್ಲಿ ಪ್ರಶ್ನಿಸಿದ್ದಾರೆ.