ಮದುವೆ ಮಂಟಪದಲ್ಲೇ ವಧುವಿನ ಮೇಲೆ ಗುಂಡು: ಚಿಕಿತ್ಸೆ ನಂತರ ವಿಧಿವಿಧಾನ ಪೂರೈಸಿದ ಮಧುಮಗಳು

ಮದುವೆ ಮಂಟಪದಲ್ಲಿ ಹಾರ ಬದಲಾಯಿಸಿಕೊಳ್ಳಲು ವೇದಿಕೆ ಹತ್ತಿದ ವಧುವಿನ ಮೇಲೆ ಅಪರಿಚಿತನೊಬ್ಬ ಗುಂಡು ಹಾರಿಸಿ ಪರಾರಿಯಾಗಿದ್ದಾನೆ. ...
ಮದುವೆ ಮಂಟಪದಲ್ಲೇ ವಧುವಿನ ಮೇಲೆ ಗುಂಡು
ಮದುವೆ ಮಂಟಪದಲ್ಲೇ ವಧುವಿನ ಮೇಲೆ ಗುಂಡು
Updated on: 
ನವದೆಹಲಿ: ಮದುವೆ ಮಂಟಪದಲ್ಲಿ ಹಾರ ಬದಲಾಯಿಸಿಕೊಳ್ಳಲು ವೇದಿಕೆ ಹತ್ತಿದ ವಧುವಿನ ಮೇಲೆ ಅಪರಿಚಿತನೊಬ್ಬ ಗುಂಡು ಹಾರಿಸಿ ಪರಾರಿಯಾಗಿದ್ದಾನೆ. 
ದೆಹಲಿಯ ಸಹಕಾರ್‌ಪುರದಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭದಲ್ಲಿ 19 ವರ್ಷದ ವಧು ಪೂಜಾ ಮೇಲೆ ವ್ಯಕ್ತಿಯೊಬ್ಬ ಗುಂಡು ಹಾರಿಸಿದ್ದಾನೆ. ಆದರೆ ಅದೃಷ್ಟವಶಾತ್ ವಧುವಿನ ಕಾಲಿಗೆ ಗುಂಡೇಟು ಬಿದ್ದಿದೆ. 
ಕೂಡಲೇ ವಧುವನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ವಧು ಸುಧಾರಿಸಿಕೊಂಡ ಬಳಿಕ ಮತ್ತೆ ಮದುವೆ ಕಾರ್ಯಕ್ರಮ ಮುಂದುವರಿಸಲಾಯಿತು. 
ವಧುವಿನ ಮೇಲೆ ಗುಂಡು ಹಾರಿಸಿದ್ದರಿಂದ ಮದುವೆ ಮಂಟಪದಲ್ಲಿ ಕ್ಷಣಕಾಲ ಗೊಂದಲ ಉಂಟಾಗಿತ್ತು. ಆದರೆ ಉಳಿದಂತೆ ಯಾರಿಗೂ ಅಪಾಯವಾಗಿಲ್ಲ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com