'ಹಳ್ಳಿ ಮೇಷ್ಟ್ರು' ನಟಿಯನ್ನು ದೋಚಿದ ತಕ್ ತಕ್ ಗ್ಯಾಂಗ್!

ಹಳ್ಳಿ ಮೇಷ್ಟ್ರು ಖ್ಯಾತಿಯ ಮನೋಜ್ ಪ್ರಭಾಕರ್ ಪತ್ನಿ ಫರೀನ್ ಪ್ರಭಾಕರ್(ಬಿಂದಿಯಾ) ಅವರನ್ನು ದೆಹಲಿಯ ಕುಖ್ಯಾತ ದರೋಡೆಕೋರರ ಗ್ಯಾಂಗ್ ತಕ್ ತಕ್ ಗ್ಯಾಂಗ್ ದೋಚಿ ಪರಾರಿಯಾಗಿದೆ.
'ಹಳ್ಳಿ ಮೇಷ್ಟ್ರು' ನಟಿಯನ್ನು ದೋಚಿದ ತಕ್ ತಕ್ ಗ್ಯಾಂಗ್!
'ಹಳ್ಳಿ ಮೇಷ್ಟ್ರು' ನಟಿಯನ್ನು ದೋಚಿದ ತಕ್ ತಕ್ ಗ್ಯಾಂಗ್!
Updated on: 
ನವದೆಹಲಿ: "ಹಳ್ಳಿ ಮೇಷ್ಟ್ರು" ಖ್ಯಾತಿಯ ಮನೋಜ್ ಪ್ರಭಾಕರ್ ಪತ್ನಿ ಫರೀನ್ ಪ್ರಭಾಕರ್(ಬಿಂದಿಯಾ) ಅವರನ್ನು ದೆಹಲಿಯ ಕುಖ್ಯಾತ ದರೋಡೆಕೋರರ ಗ್ಯಾಂಗ್ ತಕ್ ತಕ್ ಗ್ಯಾಂಗ್ ದೋಚಿ ಪರಾರಿಯಾಗಿದೆ.
ಭಾನುವಾರ ರಾತ್ರಿ ದಕ್ಷಿಣ ನವದೆಹಲಿಯ ಸರ್ವಪ್ರಿಯ ವಿಹಾರದ ನಿವಾಸಿ ಬಿಂದಿಯಾ ಅವರ ಮೇಲೆ ದರೋಡೆಕೋರರ ಗ್ಯಾಂಗ್ ದಾಳಿ ಮಾಡಿ ನಗದು ಹಾಗೂ ಮೊಬೈಲ್ ದೋಚಿ ಪರಾರಿಯಾಗಿದೆ. ಸಾಕೇತ್ ಪ್ರದೇಶದಲ್ಲಿರುವ ಸೆಲೆಕ್ಟ್ ಸಿಟಿ ವಾಕ್ ಮಾಲ್‍ ಗೆ ನಟಿ ತೆರಳಿದ ವೇಳೆ ದರೋಡೆಕೋರರು ದಾಳಿ ನಡೆಸಿದ್ದು ಘಟನೆ ವೇಳೆ ಕಾರನ್ನು ನಟಿ ಬಿಂದಿಯಾ ಅವರೇ ಚಾಲನೆ ಮಾಡುತ್ತಿದ್ದರು.
ಕಾರು ಸಿಗ್ನಲ್ ಒಂದರಲ್ಲಿ ನಿಂತಿದ್ದ ವೇಳೆ ಕಾರನ್ನು ನಾಲ್ವರು ದರೋಡೆಕೋರರು ಸುತ್ತುವರಿದು ಕಾರನ್ನು ಜಖಂ ಮಾಡಲು ಯತ್ನಿಸಿದ್ದಾರೆ.ಈ ವೇಳೆ ನಟಿ ಪ್ರಶ್ನಿಸಿದಾಗ ಆಕೆಯ ವ್ಯಾಲೆಟ್ ನಲ್ಲಿದ್ದ 6,000 ರು.ಹಾಗೂ ದುಬಾರಿ ಬೆಲೆಯ ಮೊಬೈಲ್ ಗಳನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದ್ದಾರೆ. ಆಗ ನಟಿಪ್ರತಿಭಟಿಸಿದ್ದಾರೆ. ಆಗ ನಟಿಯ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದೆ.
ಅಸ್ತಮಾದಿಂದ ಬಳಲುತ್ತಿದ್ದ ನಟಿ ಫರೀನ್ ಅಲ್ಲೇ ಅಸ್ವಸ್ಥರಾಗಿ ಕುಸಿದು ಬಿದ್ದಿದ್ದರು.ಘಟನೆ ನಡೆದಾಗ ಸ್ಥಳದಲ್ಲಿದ್ದ ಸೇನಾಧಿಕಾರಿಗಳೊಬ್ಬರು ದರೋಡೆಕೋರರ ಕಾರ್ ನಂಬರ್ ಬರೆದುಕೊಂಡಿದ್ದು ಪೋಲೀಸರಿಗೆ ಮಾಹಿತಿ ನೀಡಿ ನಟಿಗೆ ಸಹಾಯ ಮಾಡಿದ್ದಾರೆ.
ದೆಹಲಿ ಸುತ್ತಲಿನ ಪ್ರದೇಶದಲ್ಲಿ ದರೋಡೆ, ಸುಲಿಗೆಗಳಿಗೆ ಕುಖ್ಯಾತಿ ಪಡೆದ ತಕ್ ತಕ್ ಗ್ಯಾಂಗ್ ನ ಕೃತ್ಯವಿದು ಎನ್ನುವುದು ಸಾಬೀತಾಗಿದ್ದು ದರೋಡೆಕೋರರ ಪತ್ತೆಗೆ ಪೋಲೀಸರು ಬಲೆ ಬೀಶಿದ್ದಾರೆ.
ನಟಿ ಫರೀನ್ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಹಿಟ್ ಚಿತ್ರ "ಹಳ್ಳಿ ಮೇಷ್ಟ್ರು", ಡಾ ವಿಷ್ಣುವರ್ಧನ್ ನಟನೆಯ ರಾಯರು ಬಂದರು ಮಾವನ ಮನೆಗೆ ಚಿತ್ರ ಸೇರಿ ಹಲವು ಕನ್ನಡ ಚಿತ್ರದಲ್ಲಿ ಅಭಿನಯಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com