ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ ಸಂಸತ್‍ನಲ್ಲಿ ಮಂಡಿಸಿದ ಆರ್ಥಿಕ ಸಮೀಕ್ಷೆಯಲ್ಲಿ, ಉತ್ಪಾದನಾ ಬೆಳವಣಿಗೆಯನ್ನು ವೇಗಗೊಳಿಸಲು ಸ್ಟಾರ್ಟ್ ಅಪ್ ಇಂಡಿಯಾ, ಉದ್ಯಮ ಸ್ನೇಹಿ ವಾತಾವರಣ, ಮೇಕ್ ಇನ್ ಇಂಡಿಯಾ, ನಿರ್ಣಾಯಕ ಕ್ಷೇತ್ರಗಳಲ್ಲಿ ವಿದೇಶಿ ನೇರ ಹೂಡಿಕೆ ನೀತಿ ಸುಧಾರಣೆ ಸೇರಿದಂತೆ ಹಲವು ಕ್ರಮಗಳನ್ನು ಸರ್ಕಾರ ತೆಗೆದುಕೊಂಡಿದೆ. ಇದರಿಂದ 190 ದೇಶಗಳಲ್ಲಿ ಭಾರತದ ಶ್ರೇಯಾಂಕ ಹಿಂದಿನ 100 ನೇ ಸ್ಥಾನಕ್ಕಿಂತ 77 ನೇ ಸ್ಥಾನಕ್ಕೆ ಏರಿದೆ ಎಂದು 2018ರಲ್ಲಿ ಬಿಡುಗಡೆಯಾದ ವಿಶ್ವಬ್ಯಾಂಕ್ ನ 'ಉದ್ಯಮ ಸ್ನೇಹಿ ವಾತಾವರಣ' ಕುರಿತ ವರದಿ ತಿಳಿಸಿದೆ ಎಂದರು.