ಐಕೆ ಗುಜ್ರಾಲ್ ಸರ್ಕಾರದಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವರಾಗಿದ್ದ ರೆಡ್ಡಿ ಯುಪಿಎ -1 ಸರ್ಕಾರದ ಅವಧಿಯಲ್ಲಿನಗರಾಭಿವೃದ್ದಿ ಮತ್ತು ಸಂಸ್ಕೃತಿ ಖಾತೆ ನಿರ್ವಹಿಸಿದ್ದರು. ಯುಪಿಎ -2 ರಲ್ಲಿ ಅವರನ್ನು ಮತ್ತೆ ನಗರಾಭಿವೃದ್ಧಿ ಸಚಿವರನ್ನಾಗಿ ನೇಮಕ ಮಾಡಲಾಗಿತ್ತು. ನಂತರ, ಅವರು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲದ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು.ಅಲ್ಲದೆ ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಭೂ ವಿಜ್ಞಾನ ಸಚಿವರೂ ಆಗಿದ್ದರು.