ಕೊಚ್ಚಿ ವ್ಯಕ್ತಿಯ ನಂಬಿಕೆ ಗಳಿಸಿದ ನಂತರ ತನಗೆ ತುರ್ತು ಅಗತ್ಯವಿರುವುದರಿಂದ 15 ಲಕ್ಷ ನೀಡುವಂತೆ ಬೇಡಿಕೆ ಇಟ್ಟಿದ್ದಾಳೆ. ತನಗೆ ಹಣ ಸಂದಾಯವಾಗುತ್ತಿದ್ದಂತೆಯೇ ನರ್ಸ್ ವ್ಯಕ್ತಿಯೊಂದಿಗೆ ಮಾತನಾಡುವುದರಲ್ಲಿ ಆಸಕ್ತಿ ಕಮ್ಮಿ ಮಾಡಿದ್ದಾರೆ. ಕೆಲವು ದಿನಗಳ ನಂತರ ತನಗೆ ಕ್ಯಾನ್ಸರ್ ಇರುವುದಾಗಿಯೂ ವಿವಾಹವಾಗಲು ಸಾಧ್ಯವಿಲ್ಲ ಎಂದೂ ತಿಳಿಸಿದ್ದಾಳೆ. ತಾನು ಹುಡುಗಿಗೆ ಹಣ ನೀಡಿರುವ ವಿಷಯವನ್ನು ಮೋಸ ಹೋದ ವ್ಯಕ್ತಿ ಮನೆಯವರಿಂದ ಮುಚ್ಚಿಟ್ಟಿದ್ದಾನೆ. ಕೆಲವು ದಿನಗಳ ನಂತರ ಮ್ಯಾಟ್ರಿಮೋನಿ ಸೈಟ್ ನಲ್ಲಿ ಅಂಥಹದ್ದೇ ಮತ್ತೊಂದು ಪ್ರೊಫೈಲ್ ನೋಡಿದಾಗ ಅನುಮಾನಗೊಂಡು ವ್ಯಕ್ತಿ ಕೊಚ್ಚಿ ಪೊಲೀಸರಿಗೆ ದೂರು ನೀಡಿದ್ದಾರೆ.