ರಾಂಚಿ: ಜೂನ್ 21 ರಂದು ರಾಂಚಿಯಲ್ಲಿ ನಡೆಯಲಿರುವ ವಿಶ್ವ ಯೋಗ ದಿನಾಚರಣೆಯ ಪ್ರಧಾನ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ ಎಂದು ಅಧಿಕೃತ ಮೂಲಗಳಿಂದ ತಿಳಿದುಬಂದಿದೆ.
ನರೇಂದ್ರ ಮೋದಿ ಪ್ರಧಾನಿಯಾಗಿ ಎರಡನೇ ಬಾರಿಗೆ ಅಧಿಕಾರ ಸ್ವೀಕರಿಸಿದ ಬಳಿಕ ಇದು ಮೊದಲ ಸರ್ಕಾರಿ ಬೃಹತ್ ಸಾರ್ವಜನಿಕ ಕಾರ್ಯಕ್ರಮವಾಗಿದೆ.
ವಿಶ್ವ ಯೋಗ ದಿನಾಚರಣೆ ಪ್ರಧಾನ ಸಮಾರಂಭ ಆಯೋಜನೆಗಾಗಿ ದೆಹಲಿ, ಶಿಮ್ಲಾ, ಮೈಸೂರು, ಅಹಮದಾಬಾದ್ ಮತ್ತು ರಾಂಚಿಯ ಹೆಸರನ್ನು ಪಟ್ಟಿ ಮಾಡಿ,ಆಯುಷ್ ಸಚಿವಾಲಯ ಪ್ರಧಾನಿ ಇಲಾಖೆಗೆ ಕಳುಹಿಸಿತ್ತು. ಪ್ರಧಾನಿ ಕಾರ್ಯಾಲಯ ರಾಂಚಿಯನ್ನು ಅಂತಿಮವಾಗಿ ಆಯ್ಕೆ ಮಾಡಿದೆ ಎಂದು ಅಧಿಕೃತ ಮೂಲಗಳಿಂದ ತಿಳಿದುಬಂದಿದೆ.