80 ವರ್ಷದ ವೃದ್ಧೆಯ ಮೇಲೆ ಸೊಸೆಯಿಂದಲೇ ಹಲ್ಲೆ, ಮಹಿಳೆ ಬಂಧನ, ವಿಡಿಯೋ ವೈರಲ್

80 ವರ್ಷದ ವೃದ್ದೆಯ ಮೇಲೆ ಸೊಸೆಯೇ ಕ್ರೂರವಾಗಿ ಹಲ್ಲೆ ಮಾಡಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಚಂಡೀಘಡ: 80 ವರ್ಷದ ವೃದ್ದೆಯ ಮೇಲೆ ಸೊಸೆಯೇ ಕ್ರೂರವಾಗಿ ಹಲ್ಲೆ ಮಾಡಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಹರ್ಯಾಣದ ಮಹೇಂದ್ರಘಡ್ ನ ನರ್ನೌಲ್ ನ ನಿವಾಜ್ ನಗರದಲ್ಲಿ ಈ ಘಟನೆ ನಡೆದಿದ್ದು, ಸುಮಾರು 80 ವರ್ಷದ ವೃದ್ದೆಯನ್ನು ಮಹಳೆಯೊಬ್ಬರು ಮನಸೋ ಇಚ್ಛೆ ಥಳಿಸುತ್ತಿದ್ದಾರೆ. ಕೂರಲೂ ಆಗದ ಏಳಲೂ ಆಗದ ವೃದ್ದೆಯನ್ನು ಮನಸೋ ಇಚ್ಛೆ ಎಳೆದಾಡುತ್ತಿರುವ ಮಹಿಳೆ ಅವಾಚ್ಯ ಶಬ್ದಗಳಿಂದ ಆಕೆಯನ್ನು ನಿಂಧಿಸುತ್ತಿದ್ದಾರೆ. 
ಇನ್ನು ಸಂತ್ರಸ್ಥ ವೃದ್ಧೆಯನ್ನು ಚಾಂದ್ ಬಾಯಿ ಎಂದು ಗುರುತಿಸಲಾಗಿದ್ದು, ಥಳಿಸುತ್ತಿರುವ ಮಹಿಳೆಯನ್ನು ಆಕೆಯ ಸೊಸೆ ಕಾಂತಾ ದೇವಿ ಎಂದು ಹೇಳಲಾಗಿದೆ. ಮಹಿಳೆಯ ಈ ಕುಕೃತ್ಯವನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್ ನಲ್ಲಿ ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದಾರೆ. ಅಲ್ಲದೆ ಹರ್ಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಅವರಿಗೆ ಈ ಸಂಬಂಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಖಟ್ಟರ್ ಅವರು ಇದು ನಿಜಕ್ಕೂ ಖಂಡನೀಯ ಎಂದು ಟೀಕಿಸಿದ್ದಾರೆ. ಅಲ್ಲದೆ ಸೂಕ್ತ ಕ್ರಮದ ಭರವಸೆ ಕೂಡ ನೀಡಿದ್ದಾರೆ.
ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಆರೋಪಿ ಮಹಿಳೆ ಕಾಂತಾದೇವಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಸ್ತುತ ತನಿಖೆ ನಡೆಸಿರುವ ಪೊಲೀಸರು ಘಟನೆಯ ಕುರಿತು ಮಾಹಿತಿ ನೀಡಿದ್ದು, ವೃದ್ಧೆಯನ್ನು ತಮ್ಮ ಕುಟುಂಬಕ್ಕೆ ಭಾರ ಎಂದು ತಿಳಿದ ಆಕೆಯ ಸೊಸೆ ನಿತ್ಯ ಆಕೆಗೆ ಕಿರುಕುಳ ನೀಡುತ್ತಿದ್ದರು. ವೃದ್ದೆಗೆ ಸರ್ಕಾರದಿಂದ ಪಿಂಚಣಿ ಬರುತ್ತಿದ್ದು, ವೃದ್ಧೆಯ ಪತಿ ಬಿಎಸ್ ಎಫ್ ನಲ್ಲಿ ಸೇವೆ ಸಲ್ಲಿಸಿದ್ದರು. ಅವರ ಆ ಪಿಂಚಣಿ ಹಣವನ್ನೂ ಕೂಡ ಅವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಇದೀಗ ಮಹಿಳೆ ವಿರುದ್ಧ ಐಪಿಸಿ ಸೆಕ್ಷನ್ 323 ಮತ್ತು 506ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com