ಯುವತಿಯ ಸ್ನಾನದ ವಿಡಿಯೋ, ಆಕೆಯನ್ನು ರೇಪ್ ಮಾಡಿದ ವಿಡಿಯೋ ಫೇಸ್‌ಬುಕ್‌ಗೆ ಶೇರ್ ಮಾಡಿ ಪೊಲೀಸರಿಗೆ ಸಿಕ್ಕಿಬಿದ್ದ ವಿವಾಹಿತ!

ಮನೆಯಲ್ಲಿ ಯಾರು ಇಲ್ಲದಾಗ ಯುವತಿಯೋರ್ವಳು ಸ್ನಾನ ಮಾಡುತ್ತಿದ್ದಾಗ ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡಿದ್ದ ವಿವಾಹಿತನೊಬ್ಬ ಯುವತಿಗೆ ಬ್ಲಾಕ್ ಮೇಲ್ ಮಾಡಿ ಹಲವು ಬಾರಿ ರೇಪ್...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ರಾಯ್ಪುರ್: ಮನೆಯಲ್ಲಿ ಯಾರು ಇಲ್ಲದಾಗ ಯುವತಿಯೋರ್ವಳು ಸ್ನಾನ ಮಾಡುತ್ತಿದ್ದಾಗ ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡಿದ್ದ ವಿವಾಹಿತನೊಬ್ಬ ಯುವತಿಗೆ ಬ್ಲಾಕ್ ಮೇಲ್ ಮಾಡಿ ಹಲವು ಬಾರಿ ರೇಪ್ ಮಾಡಿರುವ ಘಟನೆ ರಾಜ್ ನಂದ್ ಗಾಂವ್ ನಲ್ಲಿ ನಡೆದಿದೆ.
ಛತ್ತೀಸ್ ಗಢದ ಪುರೈನಾ ನಿವಾಸಿ 34 ವರ್ಷದ ರವಿ ಕನ್ನೌಜೆ ಎಂಬಾತ 22 ವರ್ಷದ ಯುವತಿಯ ಮೇಲೆ ಅತ್ಯಾಚಾರ ಮಾಡಿದ್ದು ಈ ಸಂಬಂಧ ಆತನನ್ನು ಬಂಧಿಸಲಾಗಿದೆ. 
ಕಳೆದ ವರ್ಷ ಯುವತಿಯ ಮನೆಗೆ ಭೇಟಿ ನೀಡಿದ್ದಾಗ ಆಕೆ ಸ್ನಾನ ಮಾಡುವಾಗ ರಹಸ್ಯವಾಗಿ ತನ್ನ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದನು. ನಂತರ ಆಕೆಗೆ ಬ್ಲಾಕ್ ಮೇಲ್ ಮಾಡಿ ಹಲವು ಬಾರಿ ಅತ್ಯಾಚಾರ ಮಾಡಿದ್ದಾನೆ. ಅಲ್ಲದೆ ಕೆಲವೊಂದು ಅತ್ಯಾಚಾರದ ವಿಡಿಯೋವನ್ನು ಮಾಡಿಕೊಂಡಿದ್ದ. 
ಇತ್ತೀಚೆಗೆ ರವಿ ಜೊತೆ ಸೆಕ್ಸ್ ಮಾಡಲು ಯುವತಿ ನಿರಾಕರಿಸಿದ್ದರಿಂದ ಕೋಪಗೊಂಡ ಆತ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾನೆ. ಬಳಿಕ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದು ಈ ದೂರಿನನ್ವಯ ಪೊಲೀಸರು ಆತನನ್ನು ಬಂಧಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com