ತೆಲಂಗಾಣ: ಗಿಡ ನೆಡಲು ಬಂದ ಅರಣ್ಯ ಇಲಾಖೆ ಮಹಿಳಾ ಅಧಿಕಾರಿಯನ್ನು ಮನಸೋ ಇಚ್ಛೆ ಥಳಿಸಿದ ಸ್ಥಳೀಯರು: ವಿಡಿಯೋ ವೈರಲ್

ಅರಣ್ಯ ಬೆಳೆಸುವ ಅಭಿಯಾನದ ಭಾಗವಾಗಿ ಗಿಡ ನೆಡಲು ಬಂದ ಅಧಿಕಾರಿಯೊಬ್ಬರನ್ನು ಸ್ಥಳೀಯರು ಮನಸೋ ಇಚ್ಛೆ ಥಳಿಸಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ತೆಲಂಗಾಣ: ಗಿಡ ನೆಡಲು ಬಂದ ಅರಣ್ಯ ಇಲಾಖೆ ಮಹಿಳಾ ಅಧಿಕಾರಿಯನ್ನು ಮನಸೋ ಇಚ್ಛೆ ಥಳಿಸಿದ ಸ್ಥಳೀಯರು: ವಿಡಿಯೋ ವೈರಲ್
ತೆಲಂಗಾಣ: ಗಿಡ ನೆಡಲು ಬಂದ ಅರಣ್ಯ ಇಲಾಖೆ ಮಹಿಳಾ ಅಧಿಕಾರಿಯನ್ನು ಮನಸೋ ಇಚ್ಛೆ ಥಳಿಸಿದ ಸ್ಥಳೀಯರು: ವಿಡಿಯೋ ವೈರಲ್
Updated on: 
ತೆಲಂಗಾಣ: ಅರಣ್ಯ ಬೆಳೆಸುವ ಅಭಿಯಾನದ ಭಾಗವಾಗಿ ಗಿಡ ನೆಡಲು ಬಂದ ಅಧಿಕಾರಿಯೊಬ್ಬರನ್ನು ಸ್ಥಳೀಯರು ಮನಸೋ ಇಚ್ಛೆ ಥಳಿಸಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. 
ರಾಜ್ಯದ ಕೋಟ ಸರ್ಸಾಲ ಗ್ರಾಮದಲ್ಲಿ ಗಿಡ ನೆಡಲು ಬಂದ ಅಧಿಕಾರಿಯನ್ನು ಟಿಆರ್ ಎಸ್ ನ ಸ್ಥಳೀಯ ನಾಯಕ ಕೊನೇರು ಕೃಷ್ಣ ನೇತೃತ್ವದಲ್ಲಿ ಜಮಾಯಿಸಿದ ಸ್ಥಳೀಯರು ಥಳಿಸಿದ್ದಾರೆ. 
ಘಟನೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿ ಅನಿತಾ ತೀವ್ರವಾಗಿ ಗಾಯಗೊಂಡಿದ್ದಾರೆ. ಸ್ಥಳೀಯರನ್ನು ಸಮಾಧಾನಪಡಿಸಲು ಅಧಿಕಾರಿ ಯತ್ನಿಸುತ್ತಿದ್ದರೂ ಆಕೆಯ ಮೇಲೆ ದೊಣ್ಣೆಯಿಂದ ನಿರಂತರವಾಗಿ ಹಲ್ಲೆ ನಡೆಸಲಾಗಿದೆ. ಆಕೆಯೊಂದಿಗೆ ಇದ್ದ ಇತರ ಅಧಿಕಾರಿಗಳನ್ನೂ ಸಹ ಥಳಿಸಿದ್ದಾರೆ. 
ಗಾಯಗೊಂಡ ಅಧಿಕಾರಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಘಟನೆಗೆ ಕಾರಣ ಇನ್ನಷ್ಟೇ ತಿಳಿಯಬೇಕಿದ್ದು ತನಿಖೆಗೆ ಆದೇಶಿಸಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com