ಕಳ್ಳರು ರಾಫೆಲ್ ದಾಖಲೆಗಳನ್ನು ಗುರುವಾರ ಹಿಂತಿರುಗಿಸಿರಬೇಕು; ಕಾಂಗ್ರೆಸ್ ನಾಯಕ ಚಿದಂಬರಂ ಟೀಕೆ

ರಫೆಲ್ ಯುದ್ಧ ವಿಮಾನದ ಒಪ್ಪಂದದ ದಾಖಲೆ ಬಗ್ಗೆ ಸರ್ಕಾರಿ ಪರ ವಕೀಲ ಕೆ ಕೆ ವೇಣುಗೋಪಾಲ್ ...
ಪಿ ಚಿದಂಬರಂ
ಪಿ ಚಿದಂಬರಂ
Updated on: 
ನವದೆಹಲಿ: ರಫೆಲ್ ಯುದ್ಧ ವಿಮಾನದ ಒಪ್ಪಂದದ ದಾಖಲೆ ಬಗ್ಗೆ ಸರ್ಕಾರಿ ಪರ ವಕೀಲ ಕೆ ಕೆ ವೇಣುಗೋಪಾಲ್ ನೀಡಿರುವ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ, ಕದ್ದುಕೊಂಡ ಕಳ್ಳ ದಾಖಲೆಗಳನ್ನು ಹಿಂತಿರುಗಿಸಿರಬಹುದು ಎಂದಿದ್ದಾರೆ.
ಕೋರ್ಟ್ ಗೆ ಮತ್ತೆ ಹೇಳಿಕೆ ನೀಡಿರುವ ಕೇಂದ್ರ ಸರ್ಕಾರದ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಅವರು, 'ರಫೇಲ್‌ ಒಪ್ಪಂದಕ್ಕೆ ಸಂಬಂಧಿಸಿದ ರಹಸ್ಯ ದಾಖಲೆಗಳು ಕಳುವಾಗಿಲ್ಲ. ಮೂಲ ದಾಖಲೆಗಳ ಫೋಟೊಕಾಪಿಗಳನ್ನು ಅಕ್ರಮವಾಗಿ ರಕ್ಷಣಾ ಸಚಿವಾಲಯದ ಹೊರಗಿನವರಿಗೆ ನೀಡಲಾಗಿದೆ' ಎಂದು ಹೇಳಿದ್ದರು.
ಬುಧವಾರ ರಫೆಲ್ ದಾಖಲೆ ಕಳವಾಗಿದೆ ಎಂದಿದ್ದರು. ನಿನ್ನೆ ಅದು ಫೋಟೊಕಾಪಿ ಮಾಡಿದ ದಾಖಲೆ ಎಂದು ಹೇಳಲಾಗುತ್ತಿದೆ. ಅಂತಿಮ ಹಂತದಲ್ಲಿ ಸರ್ಕಾರ ಆಪಾದನೆಯಿಂದ ನುಣುಚಿಕೊಳ್ಳಲು ನೋಡುತ್ತಿದೆ. ಸಾಮಾನ್ಯ ಜ್ಞಾನಕ್ಕೆ ನಿಜಕ್ಕೂ ಸೆಲ್ಯೂಟ್ ಹೊಡೆಯಬೇಕು ಎಂದು ಚಿದಂಬರಂ ಸರ್ಕಾರವನ್ನು ಕುಟುಕಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com