'ಆಂಧ್ರ ಸಿಎಂ ಜಗನ್ ಮನೆ ಕಿಟಕಿ ರಿಪೇರಿಗೆ ಖರ್ಚಾಗಿದ್ದು ಬರೋಬ್ಬರೀ 73 ಲಕ್ಷ'

ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ತಮ್ಮ  ಮನೆಯ ಕಿಟಕಿಗಳಿಗಾಗಿ ಸುಮಾರು 73 ಲಕ್ಷ ರುಪಾಯಿ ಹಣ ಖರ್ಚು ಮಾಡಿದ್ದಾರೆ ಎಂದು ಟಿಡಿಪಿ ಮುಖಂಡ ಚಂದ್ರಬಾಬು ನಾಯ್ಡು ಆರೋಪಿಸಿದ್ದಾರೆ.
ಜಗನ್ ಮೋಹನ್ ರೆಡ್ಡಿ
ಜಗನ್ ಮೋಹನ್ ರೆಡ್ಡಿ
Updated on: 

ಅಮರಾವತಿ: ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ತಮ್ಮ  ಮನೆಯ ಕಿಟಕಿಗಳಿಗಾಗಿ ಸುಮಾರು 73 ಲಕ್ಷ ರುಪಾಯಿ ಹಣ ಖರ್ಚು ಮಾಡಿದ್ದಾರೆ ಎಂದು ಟಿಡಿಪಿ ಮುಖಂಡ ಚಂದ್ರಬಾಬು ನಾಯ್ಡು ಆರೋಪಿಸಿದ್ದಾರೆ.

ಮುಖ್ಯಮಂತ್ರಿಗಳ ನಿವಾಸದ ಕಿಟಕಿಗಳನ್ನು ಪಿಕ್ಸ್ ಮಾಡಲು ಸುಮಾರು 73 ಲಕ್ಷ ರು ಹಣ ಖರ್ಚು ಮಾಡಲಾಗಿದೆ ಎಂದು ಚಂದ್ರಬಾಬು ನಾಯ್ಡು ತಮ್ಮ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ.

ವೈಎಸ್ಆರ್ ಜಗನ್ ಅವರ ಸರ್ಕಾರವು ತಮ್ಮ ಮನೆಗೆ ಕಿಟಕಿಗಳನ್ನು ಸರಿಪಡಿಸಲು 73 ಲಕ್ಷ ರೂ. ಹಣ ವ್ಯಯಿಸಿದೆ. ರಾಜ್ಯದ ಖಜಾನೆಗೆ ಇದೊಂದು ಸೂಪರ್ ದುಬಾರಕಿ ಖರ್ಚಾಗಿದೆ.ಕಳೆದ 5 ತಿಂಗಳಲ್ಲಿ ಹಣ ದುರುಪಯೋಗವಾಗುತ್ತಿದೆ, ಆರ್ಥಿಕ ವ್ಯವಹಾರಗಳ ನಿರ್ವಹಣೆ ಸರಿಯಾಗುತ್ತಿಲ್ಲ, ಇದು ನಿಜಕ್ಕೂ ಭಯಂಕರ ಎಂದು ಟ್ವೀಟ್ ಮಾಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com