ಅಂಧ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಇಬ್ಬರು ಕಾಮಾಂಧ ಶಿಕ್ಷಕರು! 

ಒಳಿತು ಕೆಡುಕುಗಳನ್ನು ಮಕ್ಕಳಿಗೆ ತಿಳಿಸುವ ಶಿಕ್ಷಕರೇ ಮೃಗೀಯ ವರ್ತನೆ ತೋರಿದ್ದು, ಅಂಧ ಬಾಲಕಿಯ ಮೇಲೆ ಅತ್ಯಾಚಾರವೆಸಗಿರುವ ಘಟನೆ ಗುಜರಾತ್ ನಲ್ಲಿ ನಡೆದಿದೆ. 
ಅಂಧ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಇಬ್ಬರು ಕಾಮಾಂಧ ಶಿಕ್ಷಕರು!
ಅಂಧ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಇಬ್ಬರು ಕಾಮಾಂಧ ಶಿಕ್ಷಕರು!
Updated on: 

ಪಾಲಂಪುರ್: ಒಳಿತು ಕೆಡುಕುಗಳನ್ನು ಮಕ್ಕಳಿಗೆ ತಿಳಿಸುವ ಶಿಕ್ಷಕರೇ ಮೃಗೀಯ ವರ್ತನೆ ತೋರಿದ್ದು, ಅಂಧ ಬಾಲಕಿಯ ಮೇಲೆ ಅತ್ಯಾಚಾರವೆಸಗಿರುವ ಘಟನೆ ಗುಜರಾತ್ ನಲ್ಲಿ ನಡೆದಿದೆ. 

ಗುಜರಾತ್ ನ ಪಾಲಂಪುರದಲ್ಲಿ ಇಬ್ಬರು ಅಂಧ ಶಿಕ್ಷಕರು 15 ವರ್ಷದ ಅಂಧ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾರೆ. 

ಟೆಂಪಲ್ ಟೌನ್ ಎಂದೇ ಖ್ಯಾತವಾಗಿರುವ ಅಂಬಾಜಿಯಲ್ಲಿ ಖಾಸಗಿ ಟ್ರಸ್ಟ್ ನಿಂದ ನಡೆಸುತ್ತಿರುವ ಶಾಲೆಯಲ್ಲಿ ಅಂಧ ಬಾಲಕಿಯ ಮೇಲೆ ಸತತ 4 ತಿಂಗಳ ಕಾಲ ಅತ್ಯಾಚಾರವೆಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. 

ಅತ್ಯಾಚಾರದ ಸಂತ್ರಸ್ತ ಬಾಲಕಿ ತನ್ನ ಸೋದರ ಸಂಬಂಧಿಗೆ ತನ್ನ ಮೇಲೆ ಶಿಕ್ಷಕರೇ ಅತ್ಯಾಚಾರವೆಸಗಿರುವ ಘಟನೆಗಳನ್ನು ತಿಳಿಸಿದ್ದಾಳೆ. ಈ ಆಧಾರದ ಮೇಲೆ ದೂರು ದಾಖಲಾಗಿದ್ದು, ಶಿಕ್ಷಕರ ವಿರುದ್ಧ ಪ್ರಕರಣವನ್ನೂ ದಾಖಲಿಸಲಾಗಿದೆ. 

ದೀಪಾವಳಿ ರಜೆ ಮುಗಿದ ಬಳಿಕ ಶಾಲೆಗೆ ಹೋಗಲು ಬಾಲಕಿ ಹಿಂದೇಟು ಹಾಕುತ್ತಿದ್ದಳು. ಇದರಿಂದ  ಆತಂಕಕ್ಕೊಳಗಾದ ಪೋಷಕರು ಕಾರಣವನ್ನು ವಿಚಾರಿಸಿದ್ದಾರೆ. ಕಣ್ಣೀರಿಟ್ಟ ಬಾಲಕಿ ತನ್ನ ಮೇಲೆ ಶಾಲೆಯಲ್ಲಿ ಚಮನ್ ಠಾಕೂರ್ (62)  ಜಯಂತಿ ಠಾಕೂರ್ (30) ಎಂಬ ಇಬ್ಬರು ಶಿಕ್ಷಕರು ಅತ್ಯಾಚಾರ ನಡೆದಿರುವುದನ್ನು ವಿವರಿಸಿದ್ದಾಳೆ. 

ತನ್ನ ಗ್ರಾಮದ ಶಾಲೆಯಲ್ಲಿ 8 ನೇ ತರಗತಿಯ ವರೆಗೂ ಕಲಿತಿದ್ದ ವಿದ್ಯಾರ್ಥಿನಿ ಅಂಬಾಜಿಯಲ್ಲಿ ಖಾಸಗಿ ಟ್ರಸ್ಟ್ ನಿಂದ ನಡೆಸುತ್ತಿರುವ ಶಾಲೆಯಲ್ಲಿ ಸಂಗೀತ ಕಲಿಯುವುದಕ್ಕೆ ಸೇರಿದ್ದಳು. ಈ ವೇಳೇ ಸಂಗೀತ ಕಲಿಸುವ ಕೋಠಡಿಯಲ್ಲಿ ಜಯಂತಿ ಠಾಕೂರ್ ಎಂಬುವವರು ಬಾಲಕಿಯ ಮೇಲೆ 2 ತಿಂಗಳ ಹಿಂದೆ ಅತ್ಯಾಚಾರವೆಸಗಿದ್ದಾರೆ. ನಂತರ ಅದೇ ಕೊಠಡಿಯಲ್ಲಿ ಚಮಾನ್ ಠಾಕೂರ್ ನಿಂದಲೂ ಅತ್ಯಾಚಾರ ನಡೆದಿದೆ. 

ಈ ಬಳಿಕ ತನ್ನ ಪರಿಸ್ಥಿತಿಯನ್ನು ಇತರ ಮೂವರು ಶಿಕ್ಷಕರಿಗೆ ತಿಳಿಸಿದ ನಂತರ ತನ್ನ ಮೇಲಿನ ಲೈಂಗಿಕ ಕಿರುಕುಳ ನಿಂತಿದೆ ಎಂದು ಬಾಲಕಿ ಹೇಳಿದ್ದಾಳೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಪ್ರಾರಂಭಿಸಿದ್ದಾರೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com