ಸಿಯಾಚೆನ್‌ನಲ್ಲಿ ಹಿಮಪಾತಕ್ಕೆ ಇಬ್ಬರು ಯೋಧರು ಬಲಿ

ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನ ದಕ್ಷಿಣ ಸಿಯಾಚಿನ್ ಹಿಮನದಿಯಲ್ಲಿ ಸುಮಾರು 18,000 ಅಡಿ ಎತ್ತರದಲ್ಲಿ ಹಿಮಪಾತವಾಗಿದ್ದು ಅಲ್ಲಿ ಗಸ್ತು ತಿರುಗುತ್ತಿದ್ದ ಇಬ್ಬರು ಸೇನಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ಜಮ್ಮು: ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನ ದಕ್ಷಿಣ ಸಿಯಾಚಿನ್ ಹಿಮನದಿಯಲ್ಲಿ ಸುಮಾರು 18,000 ಅಡಿ ಎತ್ತರದಲ್ಲಿ ಹಿಮಪಾತವಾಗಿದ್ದು ಅಲ್ಲಿ ಗಸ್ತು ತಿರುಗುತ್ತಿದ್ದ ಇಬ್ಬರು ಸೇನಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.

ದಕ್ಷಿಣ ಸಿಯಾಚಿನ್ ಹಿಮನದಿಯ ಸುಮಾರು 18,000 ಅಡಿ ಎತ್ತರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸೇನೆಯ ಗಸ್ತು ವಿಭಾಗದ ಸೈನಿಕರು ಶನಿವಾರ ಮುಂಜಾನೆ ಉಂಟಾಗಿದ್ದ ಹಿಮಪಾತದಿಂದಾಗಿ ಸಾವಿಗೀಡಾಗಿದ್ದಾರೆ ಎಂದು ಶ್ರೀನಗರ ಮೂಲದ ರಕ್ಷಣಾ ವಕ್ತಾರ ಕರ್ನಲ್ ರಾಜೇಶ್ ಕಲಿಯಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಗಸ್ತು ಸೈನಿಕರ ಹಿಂಬಾಲಿಸಿರುವ ಅವಲಾಂಚ್ ರಿಸ್ಕ್ ಟೀಂ (ಎಆರ್‌ಟಿ) ಕೂಡಲೇ ಧಾವಿಸಿ ಗಸ್ತು ತಿರುಗುತ್ತಿದ್ದ ಎಲ್ಲ ಸದಸ್ಯರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ. ಹಿಮಪಾತದಿಂದ ಸಂತ್ರಸ್ತರನ್ನು ಸ್ಥಳಾಂತರಿಸಲು ಸೇನೆಯ ಹೆಲಿಕಾಪ್ಟರ್‌ ಬಳಕೆ ಮಾಡಲಾಗಿದೆ. ವೈದ್ಯಕೀಯ ತಂಡಗಳ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ, ಇಬ್ಬರು ಸೇನಾ ಸಿಬ್ಬಂದಿಗಳು ಹಿಮಪಾತದಲ್ಲಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿ ಹೇಳಿದರು.

ಕಳೆದ ಎರಡು ವಾರಗಳಲ್ಲಿ ಎರಡನೇ ಬಾರಿಗೆ ಸಿಯಾಚಿನ್‌ನಲ್ಲಿ ಹಿಮಪಾತ ಸಂಭವಿಸಿದೆ. ಇದಕ್ಕೂ ಮುನ್ನ ನವೆಂಬರ್ 18 ರಂದು ಸಿಯಾಚಿನ್ ಹಿಮನದಿಯ ಉತ್ತರ ಭಾಗದಲ್ಲಿ ನಡೆದ ಹಿಮಪಾತದಲ್ಲಿ ನಾಲ್ಕು ಭಾರತೀಯ ಸೇನಾ ಸಿಬ್ಬಂದಿ ಮತ್ತು ಇಬ್ಬರು ನಾಗರಿಕರು ಸಾವನ್ನಪ್ಪಿದ್ದರು.

ಕಾರಕೋರಂ ಶ್ರೇಣಿಯಲ್ಲಿ ಸುಮಾರು 20,000 ಅಡಿಗಳಷ್ಟು ಎತ್ತರದಲ್ಲಿರುವ ಸಿಯಾಚಿನ್ ಹಿಮನದಿ ವಿಶ್ವದ ಅತಿ ಎತ್ತರದ ಮಿಲಿಟರಿ ವಲಯ ಎಂದು ಹೆಆರಾಗಿದ್ದು ಅಲ್ಲಿ ಸೈನಿಕರು ಹಿಮಪಾತ ಮತ್ತು ಹೆಚ್ಚಿನ ಗಾಳಿಯೊಂದಿಗೆ ಸೆಣೆಸಬೇಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com