ಸುಜುಕಿ ಮೋಟಾರ್ ಸೈಕಲ್ ಇಂಡಿಯಾ ದಾಖಲೆ ಮಾರಾಟ

ಜಪಾನ್‌ನ ಸುಜುಕಿ ಮೋಟಾರ್ ಕಾರ್ಪೋರೇಷನ್‌ನ ಸಂಪೂರ್ಣ ಸ್ವಾಮ್ಯದ ಸುಜುಕಿ ಮೋಟಾರ್ ಸೈಕಲ್ ಇಂಡಿಯಾ(ಎಸ್‌ಎಂಐಪಿಎಲ್) ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ದಾಖಲೆಯ ಮಾರಾಟ ಸಾಧಿಸಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಮುಂಬೈ: ಜಪಾನ್‌ನ ಸುಜುಕಿ ಮೋಟಾರ್ ಕಾರ್ಪೋರೇಷನ್‌ನ ಸಂಪೂರ್ಣ ಸ್ವಾಮ್ಯದ ಸುಜುಕಿ ಮೋಟಾರ್ ಸೈಕಲ್ ಇಂಡಿಯಾ(ಎಸ್‌ಎಂಐಪಿಎಲ್) ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ದಾಖಲೆಯ ಮಾರಾಟ ಸಾಧಿಸಿದೆ. 

ಈ ಅವಧಿಯಲ್ಲಿ ಕಂಪೆನಿ 63,382 ವಾಹನ ಮಾರಾಟ ಮಾಡಿದ್ದು, 2018ರ ಇದೇ ಅವಧಿಯಲ್ಲಿ 63, 140 ವಾಹನ ಮಾರಾಟ ಮಾಡಲಾಗಿತ್ತು. 
ಕಳೆದ ಸೆಪ್ಟೆಂಬರ್‌ನಲ್ಲಿ ದೇಶೀಯ ಮತ್ತು ರಫ್ತು ಸೇರಿ ಒಟ್ಟು ಮಾರಾಟ ಶೇ.2.11 ರಷ್ಟು ವೃದ್ಧಿಯಾಗಿದ್ದು, 73,659 ವಾಹನಗಳು ಮಾರಾಟವಾಗಿವೆ. 2018ರ ಇದೇ ಅವಧಿಯಲ್ಲಿ 72,124 ವಾಹನಗಳು ಮಾರಾಟವಾಗಿದ್ದವು. 

ಎಸ್‌ಎಂಐಪಿಎಲ್ ವ್ಯವಸ್ಥಾಪಕ ನಿರ್ದೇಶಕ ಕೊಯ್‌ಚಿರೊ ಹಿರಾರೋ ಈ ಸಂದರ್ಭದಲ್ಲಿ ಮಾತನಾಡಿ, ದೇಶೀಯ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ ದಾಖಲೆ ಮಾರಾಟವಾಗಿರುವುದು ಸಂತಸ ತಂದಿದೆ. ಇದು ಗ್ರಾಹಕರಿಗೆ ಕಂಪೆನಿಯ ಮೇಲೆ ಇಟ್ಟಿರುವ ವಿಶ್ವಾಸ ತೋರಿಸುತ್ತದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com