ಮಾರಿಷಸ್ ಅಭಿವೃದ್ಧಿಗೆ ಭಾರತ ಬದ್ಧ : ಪ್ರಧಾನಿ ಮೋದಿ

ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಮಾರಿಷಸ್ ಪ್ರಧಾನಿ ಪ್ರವಿಂದ್ ಜುಗ್ ನಾಥ್ ಇಂದು ಮಾರಿಷಸ್ ನ ಎರಡು ಮಹತ್ವದ ಯೋಜನೆಗಳಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಚಾಲನೆ ನೀಡಿದರು. 
ಮಾರಿಷಸ್ ಅಭಿವೃದ್ಧಿಗೆ ಭಾರತ ಬದ್ಧ : ಪ್ರಧಾನಿ ಮೋದಿ
ಮಾರಿಷಸ್ ಅಭಿವೃದ್ಧಿಗೆ ಭಾರತ ಬದ್ಧ : ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಮಾರಿಷಸ್ ಪ್ರಧಾನಿ ಪ್ರವಿಂದ್ ಜುಗ್ ನಾಥ್ ಇಂದು ಮಾರಿಷಸ್ ನ ಎರಡು ಮಹತ್ವದ ಯೋಜನೆಗಳಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಚಾಲನೆ ನೀಡಿದರು. 

ಮೆಟ್ರೋ ಎಕ್ಸ್ ಪ್ರೆಸ್ ರೈಲಿನ ಮೊದಲ ಹಂತ ಮತ್ತು ಹೊಸ ಇ ಎನ್ ಟಿ-ಕಿವಿ ಗಂಟಲು ಮತ್ತು ಗಂಟಲು ಹೊಸ ಆಸ್ಪತ್ರೆಯನ್ನು ಉಭಯ ನಾಯಕರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಈ ಯೋಜನೆಗಳು ಮಾರಿಷಸ್ ಜನರಿಗೆ ಅತ್ಯಂತ ಸಹಕಾರಿಯಾಗಲಿದೆ. ಇದು ದ್ವೀಪ ರಾಷ್ಟ್ರದ ಅಭಿವೃದ್ಧಿಗೆ ಭಾರತದ ಸಂಕೇತ ಎಂದು ಅವರು ಬಣ್ಣಿಸಿದ್ದಾರೆ.

ಭಾರತಕ್ಕೆ ಚಿರಋಣಿಯಾಗಿರುವುದಾಗಿ ಜುಗನ್ನಾಥ್ ಹೇಳಿದ್ದಾರೆ. ಮಾರಿಷಸ್ ಅಭಿವೃದ್ಧಿಗೆ ಭಾರತ ಮಾತೆಯ ಆಶೀರ್ವಾದ ಅಗತ್ಯ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com