ಗಡಿಯಲ್ಲಿ ಮತ್ತೆ ಚೀನಾ ಕ್ಯಾತೆ: ಲಡಾಖ್ ಗಡಿಯಲ್ಲಿ ಭಾರತ-ಚೀನಾ ಸೈನಿಕರ ನಡುವೆ ಸಂಘರ್ಷ

ಗಡಿಯಲ್ಲಿ ಚೀನಾ ಪದೇ ಪದೇ ಕ್ಯಾತೆ ತೆಗೆಯುತ್ತಿದ್ದು, ಜಮ್ಮು ಮತ್ತು ಕಾಶ್ಮೀರದ ಲಡಾಖ್ ನಲ್ಲಿರುವ ಪ್ಯಾಂಗಾಂಗ್ ಸರೋವರದ ಬಳಿ ಭಾರತ ಮತ್ತು ಚೀನಾ ಸೇನೆ ನಡುವೆ ಸಂಘರ್ಷ ಏರ್ಪಟ್ಟಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಲೇಹ್: ಗಡಿಯಲ್ಲಿ ಚೀನಾ ಪದೇ ಪದೇ ಕ್ಯಾತೆ ತೆಗೆಯುತ್ತಿದ್ದು, ಜಮ್ಮು ಮತ್ತು ಕಾಶ್ಮೀರದ ಲಡಾಖ್ ನಲ್ಲಿರುವ ಪ್ಯಾಂಗಾಂಗ್ ಸರೋವರದ ಬಳಿ ಭಾರತ ಮತ್ತು ಚೀನಾ ಸೇನೆ ನಡುವೆ ಸಂಘರ್ಷ ಏರ್ಪಟ್ಟಿದೆ. 

ಪ್ಯಾಂಗಾಂಗ್ ಸರೋವರದ ಬಳಿ ವಾಸ್ತವಿಕ ಗಡಿ ರೇಖೆಯ ಬಳಿ ನಿನ್ನೆ ಬೆಳಿಗ್ಗೆ ಭಾರತೀಯ ಸೇನೆ ಗಸ್ತು ತಿರುತ್ತಿದ್ದರು. ಈ ವೇಳೆ ಚೀನಾ ಸೈನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆಂದು ವರದಿಗಳು ತಿಳಿಸಿವೆ.

ಬಳಿಕ ಉಭಯ ಸೇನೆಗಳ ನಡುವೆ ಸಂಘರ್ಷ ಎದುರಾಗಿದ್ದು, ಕೆಲ ಕಾಲ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಸಂಜೆಯವರೆಗೂ ಪರಿಸ್ಥಿತಿ ಹಾಗೆಯೇ ಇತ್ತು ಎಂದು ಮೂಲಗಳು ತಿಳಿಸಿವೆ.

ಬಳಿ ಉಭಯ ಸೇನೆಗಳು ಹೆಚ್ಚುವರಿ ಸೈನಿಕರನ್ನು ಸ್ಥಳಕ್ಕೆ ಕರೆಸಿಕೊಂಡಿದ್ದು, ಸಂಜೆ ವೇಳೆ ಭಾರತ ಮತ್ತು ಚೀನಾ ಸೇನೆಯ ಅಧಿಕಾರಿಗಳು ಸಭೆ ನಡೆಸಿ, ಸಮಸ್ಯೆಯನ್ನು ಬಗೆಹರಿಸಿದ್ದಾರೆಂದು ತಿಳಿದುಬಂದಿದೆ. 

ಪ್ಯಾಂಗಾಂಗ್ ಸರೋವರದ ಬಳಿ ಈ ಹಿಂದೆ ಕೂಡ ಚೀನಾ ಇದೇ ರೀತಿ ಕ್ಯಾತೆ ತೆಗೆದಿತ್ತು. 2017ರ ಆಗಸ್ಟ್ 15ರಂದು ಚೀನಾ ಸೇನೆ ಭಾರತದ ಗಡಿಯೊಳಗೆ ಅತಿಕ್ರಮ ಪ್ರವೇಶ ಮಾಡಲು ಯತ್ನಿಸಿತ್ತು. ಈ ವೇಳೆ ಭಾರತೀಯ ಸೇನೆ ಚೀನಾ ಸೈನಿಕರನ್ನು ತಡೆದಿದ್ದರು. ಬಳಿಕ ಸ್ಥಳದಲ್ಲಿ ಉಭಯ ದೇಶಗಳ ಸೈನಿಕರು ಕಲ್ಲು ತೂರಾಟ ನಡೆಸಿದ್ದರಲ್ಲದೆ, ಪರಸ್ಪರ ತಳ್ಳಾಡಿಕೊಂಡಿದ್ದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com