ನ.05 ರಂದು ದೇವೇಂದ್ರ ಫಡ್ನವೀಸ್ ಸಿಎಂ ಪದಗ್ರಹಣ!? 

ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ವಿಷಯದಲ್ಲಿ ಗೊಂದಲ ಮುಂದುವರೆದಿದೆ. ಆದರೆ ಇತ್ತ ಬಿಜೆಪಿ ಮುಖ್ಯಮಂತ್ರಿಗಳ ಪದಗ್ರಹಣಕ್ಕೆ ಸಜ್ಜಾಗುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. 
ನ.05 ರಂದು ದೇವೇಂದ್ರ ಫಡ್ನವೀಸ್ ಸಿಎಂ ಪದಗ್ರಹಣ!?
ನ.05 ರಂದು ದೇವೇಂದ್ರ ಫಡ್ನವೀಸ್ ಸಿಎಂ ಪದಗ್ರಹಣ!?

ಮುಂಬೈ: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ವಿಷಯದಲ್ಲಿ ಗೊಂದಲ ಮುಂದುವರೆದಿದೆ. ಆದರೆ ಇತ್ತ ಬಿಜೆಪಿ ಮುಖ್ಯಮಂತ್ರಿಗಳ ಪದಗ್ರಹಣಕ್ಕೆ ಸಜ್ಜಾಗುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. 

ಜೀ ನ್ಯೂಸ್ ಪ್ರಕಟಿಸಿರುವ ವರದಿಯ ಪ್ರಕಾರ ಮಹಾರಾಷ್ಟ್ರದಲ್ಲಿ ಏಕೈಕ ದೊಡ್ಡ ಪಕ್ಷವಾಗಿ(ಹೆಚ್ಚು ಶಾಸಕರ ಸಂಖ್ಯಾಬಲ) ಹೊಂದಿರುವ ಅರ್ಹತೆಯನ್ನೇ ಇಟ್ಟುಕೊಂಡು ಬಿಜೆಪಿ ಸರ್ಕಾರ ರಚನೆಗೆ ಮುಂದಾಗಿದೆ. ನ.05 ಅಥವಾ 6 ರಂದು ದೇವೇಂದ್ರ ಫಡ್ನವೀಸ್ ಮುಂಬೈ ನ ವಾಂಖೆಡೆ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಹೇಳಿದ್ದಾರೆ.
 
ಶಿವಸೇನೆ ಮೈತ್ರಿಗೆ ಒಪ್ಪದೇ ಇದ್ದರೂ ಸಹ ಸರ್ಕಾರ ರಚನೆಗೆ ತೀರ್ಮಾನಿಸಿದೆ ಎಂದು ಪಕ್ಷದ ಮೂಲಗಳು ಹೇಳಿವೆ. ಶಿವಸೇನೆ 50:50 ಅಧಿಕಾರ ಹಂಚಿಕೆ ಸೂತ್ರದಿಂದ ಯಾವುದೇ ಕಾರಣಕ್ಕೂ ಹಿಂದೆಸರಿಯುವುದಿಲ್ಲ ಎಂದು ಶಿವಸೆನೆಯ ನಾಯಕ ಸಂಜಯ್ ರಾವುತ್ ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com