ಕ್ಸಿ ಜಿನ್ ಪಿಂಗ್ ಗೆ ಗೈಡ್ ಆದ ಮೋದಿ; ಪಂಚೆ, ಶರ್ಟ್, ಧೋತಿ.. ಪಕ್ಕಾ ದಕ್ಷಿಣದ ಸ್ಟೈಲ್ ನಲ್ಲಿ ಮಿಂಚಿದ ಪ್ರಧಾನಿ

ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಎರಡು ದಿನದ ಪ್ರವಾಸಕ್ಕಾಗಿ ಶುಕ್ರವಾರ ಭಾರತಕ್ಕೆ ಬಂದಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಷಿ ಅವರು ತಮಿಳುನಾಡಿನ ಕಡಲತಡಿಯ ಪ್ರವಾಸಿತಾಣ ಮಾಮಲ್ಲಪುರಂಗೆ ಭೇಟಿ ನೀಡಿದರು.
ಮಹಾಬಲಿಪುರಂನಲ್ಲಿ ಪ್ರಧಾನಿ ಮೋದಿ-ಕ್ಸಿ ಜಿನ್ ಪಿಂಗ್
ಮಹಾಬಲಿಪುರಂನಲ್ಲಿ ಪ್ರಧಾನಿ ಮೋದಿ-ಕ್ಸಿ ಜಿನ್ ಪಿಂಗ್

ಚೆನ್ನೈ: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಎರಡು ದಿನದ ಪ್ರವಾಸಕ್ಕಾಗಿ ಶುಕ್ರವಾರ ಭಾರತಕ್ಕೆ ಬಂದಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಷಿ ಅವರು ತಮಿಳುನಾಡಿನ ಕಡಲತಡಿಯ ಪ್ರವಾಸಿತಾಣ ಮಾಮಲ್ಲಪುರಂಗೆ ಭೇಟಿ ನೀಡಿದರು.

ಮಧ್ಯಾಹ್ನ ಚೆನ್ನೈನ ವಿಮಾನನಿಲ್ದಾಣಕ್ಕೆ ಬಂದಿಳಿದಿದ್ದ ಕ್ಸಿ ಜಿನ್‌ಪಿಂಗ್‌ ಅವರು ಸಂಜೆ ಮಾಮಲ್ಲಪುರಂಗೆ ಬಂದಿಳಿದಾಗ ನರೇಂದ್ರ ಮೊದಿ ಅವರು ಆತ್ಮೀಯವಾಗಿ ಬರಮಾಡಿಕೊಂಡರು. ಈ ವೇಳೆ ಪ್ರಧಾನಿ ಮೋದಿ ಪಂಚೆಯುಟ್ಟು ಗಮನ ಸೆಳೆದರೆ, ಕ್ಸಿ ಅವರು ಬಿಳಿ ಅಂಗಿ ಹಾಗೂ ಪ್ಯಾಂಟ್ ನಲ್ಲಿ ಮಿಂಚಿದರು.  ಇಬ್ಬರೂ ನಾಯಕರು ಪ್ರವಾಸಿ ತಾಣದಲ್ಲಿ ವಿಹರಿಸಿದರು. ಈ ವೇಳೆ ನರೇಂದ್ರ ಮೊದಿ ಅವರು, ಸ್ಥಳದ ಐತಿಹಾಸಿಕ ಮಹತ್ವ ಹಾಗೂ ಪರಂಪರೆಯ ಕುರಿತು ಕ್ಸಿ ಜಿನ್ ಪಿಂಗ್ ಅವರಿಗೆ ಮಾಹಿತಿ ನೀಡಿದರು. ಇಬ್ಬರೂ ಕುಶಲೋಪರಿಯಲ್ಲಿ ತೊಡಗಿ ಪ್ರವಾಸಿತಾಣದ ವೀಕ್ಷಣೆ ಮಾಡಿದರು. 

ಇಲ್ಲಿನ ಪಂಚ ರಥ ಸಮುಚ್ಚಯದ ಬಳಿ ಕುಳಿತು ಇಬ್ಬರೂ ನಾಯಕರು ಎಳನೀರು ಸೇವಿಸುತ್ತಾ, ಸ್ಥಳದ ಮಾಹಿತಿ ಹಂಚಿಕೊಂಡರು. ಉಭಯ ನಾಯಕರು ಮಹಾಬಲಿಪುರಂ ದೇವಸ್ತಾನದ ಹುಲ್ಲು ಹಾಸಿನ ಮೇಲೆ ಸ್ವಲ್ಪ ಹೊತ್ತು ವಿಹರಿಸಿದರು. ಈ ವೇಳೆ ಪ್ರಧಾನಿ ಮೋದಿ ಚೀನಾ ಅಧ್ಯಕ್ಷರಿಗೆ ಇಲ್ಲಿನ ಸ್ಥಳದ ಮಾಹಿತಿ ನೀಡುವ ಮೂಲಕ ಕೆಲಕಾಲ ಅವರಿಗೆ ಗೈಡ್ ಆಗಿ ಮಾರ್ಪಟ್ಟಿದ್ದರು. ಇಲ್ಲಿನ ಅಪರೂಪದ ದೇಗುಲಗಳ ಪರಿಚಯವನ್ನು ಪ್ರಧಾನಿ ಮೋದಿ ಮಾಡಿಕೊಟ್ಟರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com