ದೇಶ

ಕೊರೋನಾ ನಿರ್ವಹಣೆಯಲ್ಲಿ ಮೋದಿ ವಿಶ್ವಕ್ಕೇ ನಂ.1: ಸತ್ಯ ಕಣ್ಣಿಗೇ ಕಾಣುತ್ತಿದೆ ಎಂದು ಪ್ರಧಾನಿಯನ್ನು ಕೊಂಡಾಡಿದ ಅಮಿತ್ ಶಾ

ಕೊರೋನಾ ನಿರ್ವಹಣೆಯಲ್ಲಿ ಮೋದಿ ವಿಶ್ವಕ್ಕೇ ನಂ.1: ಸತ್ಯ ಕಣ್ಣಿಗೇ ಕಾಣುತ್ತಿದೆ ಎಂದು ಪ್ರಧಾನಿಯನ್ನು ಕೊಂಡಾಡಿದ ಅಮಿತ್ ಶಾ
ಸಂಗ್ರಹ ಚಿತ್ರ
Published On :

ನವದೆಹಲಿ; ಕೊರೋನಾ ವೈರಸನ್ನು ಸಮರ್ತವಾಗಿ ನಿಭಾಯಿಸಿದ ಜಾಗತಿಕ ನಾಯಕರ ಪಟ್ಟಿಯಲ್ಲಿ ಪ್ರಧಾನಿ ಮೋದಿಯವರು ಅಗ್ರ ಸ್ಥಾನ ಪಡೆದಿರುವುದಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮೋದಿಯವರನ್ನು ಕೊಂಡಾಡಿದ್ದಾರೆ. 

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ದೇಶ ಸಮರ್ಥ ನಾಯಕತ್ವದಡಿಯಲ್ಲಿ ಮುನ್ನುಗ್ಗುತ್ತಿರುವುದಕ್ಕೆ ಈ ಸಮೀಕ್ಷಾ ವರದಿಯೇ ಸಾಕ್ಷಿ ಎಂದು ಹೇಳಿದ್ದಾರೆ. 

ಕೊರೋನಾ ವೈರಸ್ ಹಾವಳಿಯನ್ನು ಸಮರ್ಥವಾಗಿ ನಿಭಾಯಿಸಿದ ವಿಶ್ವ ನಾಯಕರ ಪಟ್ಟಿಯನ್ನು ಅಮೆರಿಕಾದ ಮಾರ್ನಿಂಗ್ ಕನ್ಸಲ್ಟ್ ಎಂಬ ಸಂಸ್ಥೆ ಕೆಲ ದಿನಗಳ ಹಿಂದಷ್ಟೇ ಬಿಡುಗಡೆ ಮಾಡಿತ್ತು. 

ಈ ಪಟ್ಟಿಯಲ್ಲಿ ಪ್ರಧಾನಿ ಮೋದಿಯವರು ಅಗ್ರಸ್ಥಾನ ಪಡೆದಿದ್ದರು. ಈ ಸಂತದ ಸಂಗತಿಯನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹಂಚಿಕೊಂಡಿದ್ದರು. 

ಈ ಸಮೀಕ್ಷಾ ವರದಿಯನ್ನು ಆಧರಿಸಿ ಅಮಿತ್ ಶಾ ಅವರು ಇದೀಗ ಮೋದಿಯವರ ನಾಯಕತ್ವವನ್ನು ಕೊಂಡಾಡಿದ್ದಾರೆ. 

ಸತ್ಯ ಸ್ವಯಂ ಸಾಕ್ಷಿ...ದೇಶ ಸಮರ್ಥ ನಾಯಕತ್ವದ ಅಡಿಯಲ್ಲಿ ಮುನ್ನುಗ್ಗುತ್ತಿರುವುದಕ್ಕೆ ಈ ಸಮೀಕ್ಷಾ ವರದಿಯೇ ಸಾಕ್ಷಿ. ಸತ್ಯಕ್ಕೆ ಯಾವುದೇ ಸಾಕ್ಷಿಗಳನ್ನೂ ಒದಗಿಸುವ ಅವಶ್ಯಕತೆ ಇರುವುದಿಲ್ಲ. ಖುದ್ದು ಸತ್ಯವೇ ಸಾಕ್ಷಿಯಾಗಿದೆ. ಕೊರೋನಾ ವೈರಸನ್ನು ಪ್ರಧಾನಿ ಮೋದಿ ನಿರ್ವಹಿಸುತ್ತಿರುವ ರೀತಿಯನ್ನು ಇಡೀ ವಿಶ್ವವೇ ಮೆಚ್ಚಿಕೊಂಡಿದೆ. ಮೋದಿ ಕೇವಲ ಭಾರತ ಮಾತ್ರವಲ್ಲದೇ, ಇಡೀ ವಿಶ್ವ ಸಮುದಾಯದ ಆರೋಗ್ಯದ ರಕ್ಷಣೆಯಲ್ಲಿ ನಿರತರಾಗಿದ್ದಾರೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬ ಭಾರತೀಯನೂ ಸುರಕ್ಷತೆಯ ಭಾವನೆ ಅನುಭವಿಸುತ್ತಿರುವುದಕ್ಕೆ ಪ್ರಧಾನಿ ಮೋದಿಯವರ ಪರಿಣಾಮಕಾರಿ ನೀತಿಗಳೇ ಕಾರಣ ಎಂದು ಕೊಂಡಾಡಿದ್ದಾರೆ. 

ಕೊರೋನಾ ಎಂಬ ಮಹಾಮಾರಿ ವೈರಸನ್ನು ಹಿಮ್ಮೆಟ್ಟಿಸಲು ಇಡೀ ಭಾರದ ಒಂದಾಗಿರವುದಸಲ್ಲಿ ಸಂಶಯವೇ ಇಲ್ಲ. ಮೋದಿ ನೇತೃತ್ವದಲ್ಲಿ ಭಾರತ ಈ ಸಂಕಷ್ಟದಿಂದ ಪಾರಾಗಲಿದೆ ಎಂಬ ಭವರಸೆಯನ್ನೂ ಇದೇ ವೇಳೆ ವ್ಯಕ್ತಪಡಿಸಿದ್ದಾರೆ. 

ಕೊರೊನಾ ವೈರಸ್ ಎಂಬ ಮಾರಕ ವೈರಾಣುವನ್ನು ಹಿಮ್ಮೆಟ್ಟಿಸಲು ಇಡೀ ಭಾರತ ಒಂದಾಗಿರುವುದರಲ್ಲಿ ಸಂಶಯವೇ ಇಲ್ಲ ಎಂದಿರುವ ಅಮಿತ್ ಶಾ, ಪ್ರಧಾನಿ ಮೋದಿ ನೇತೃತ್ವದಲ್ಲಿ ಭಾರತ ಈ ಸಂಕಷ್ಟದಿಂದ ಪಾರಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.