ಕೊರೋನಾ ವೈರಸ್: 'ಮಹಾ' ದಾಖಲೆ, ಒಂದೇ ದಿನ 811 ಸೋಂಕು ಪ್ರಕರಣ, ಉದ್ಧವ್ ಠಾಕ್ರೆ ಸರ್ಕಾರ ಹೇಳಿದ್ದೇನು ಗೊತ್ತಾ?

ನವದೆಹಲಿ: ಮಾರಕ ಕೊರೋನಾ ವೈರಸ್ ಗೆ ಮಹಾರಾಷ್ಟ್ರ ತತ್ತರಿಸಿ ಹೋಗಿದ್ದು, ಇಂದು ಮತ್ತೆ ಬರೊಬ್ಬರಿ 811 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಆ ಮೂಲಕ ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 6,817ಕ್ಕೆ ಏರಿಕೆಯಾಗಿದೆ.
ಈ ಬಗ್ಗೆ ಮಹಾರಾಷ್ಟ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದ್ದು, ಇಂದು ಮಹಾರಾಷ್ಟ್ರದಾದ್ಯಂತ 811 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಸೋಂಕಿತರ ಸಂಖ್ಯೆ 6,817ಕ್ಕೆ ಏರಿಕೆಯಾಗಿದೆ. ಈ ಪೈಕಿ ಮುಂಬೈನಲ್ಲಿ ಗರಿಷ್ಠ ಸೋಂಕು ಪ್ರಕರಣಗಳಿದ್ದು, ಇಲ್ಲಿ ಸೋಂಕಿತರ ಸಂಖ್ಯೆ 4,447ಕ್ಕೆ ಏರಿಕೆಯಾಗಿದೆ. ಅಂತೆಯೇ 178 ಮಂದಿ ಸೋಂಕಿತರು ಸಾವನ್ನಪ್ಪಿದ್ದು, 559 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಮುಂಬೈ ಬಳಿಕ ಗರಿಷ್ಛ ಸೋಂಕಿತರನ್ನು ಹೊಂದಿರುವ ನಗರ ಎಂದರೆ ಅದು ಪುಣೆ. ಇಲ್ಲಿ ಸೋಂಕಿತರ ಸಂಖ್ಯೆ 848ಕ್ಕೆ ಏರಿಕೆಯಾಗಿದ್ದು, 63 ಮಂದಿ ಸಾವನ್ನಪ್ಪಿದ್ದಾರೆ. 164 ಸೋಂಕಿತರು ಗುಣಮುಖರಾಗಿದ್ದಾರೆ. ಉಳಿದಂತೆ ನವೀ ಮುಂಬೈನಲ್ಲಿ 125 ಮಂದಿ (ಸಾವು-4, ಗುಣಮುಖ-13) ಸೋಂಕಿತರಿದ್ದು, ಥಾಣೆಯಲ್ಲಿ 220 ಸೋಂಕಿತರು (ಸಾವು-6, ಗುಣಮುಖ-12), ಮಾಲೆಗಾಂವ್ ನಲ್ಲಿ 116 ಸೋಂಕಿತರು (ಸಾವು-11, ಗುಣಮುಖ-03), ನಾಗಪುರದಲ್ಲಿ 99 ಸೋಂಕಿತರು (ಸಾವು-1, ಗುಣಮುಖ-17) ಮತ್ತು ಔರಂಗಾಬಾದ್ ನಲ್ಲಿ 42 ಸೋಂಕಿತರಿದ್ದಾರೆ (ಸಾವು-5, ಗುಣಮುಖ-23).
ಮರಣ ಪ್ರಮಾಣ ಕಡಿಮೆಯಾಗಿದೆ: ಸರ್ಕಾರ
ಇನ್ನು ಮಹಾರಾಷ್ಟ್ರದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆಯಾದರೂ, ಮರಣ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ ಎಂದು ಉದ್ಧವ್ ಠಾಕ್ರೆ ಸರ್ಕಾರ ಹೇಳಿದೆ. ಈ ಬಗ್ಗೆ ಮಾಹಿತಿ ನೀಡಿರುವ ಮಹಾರಾಷ್ಟ್ರ ಆರೋಗ್ಯಸಚಿವಾಲಯ, ಈ ಹಿಂದೆ ರಾಜ್ಯದಲ್ಲಿ ಕೊರೋನಾ ವೈರಸ್ ಮರಣ ಪ್ರಮಾಣ ಶೇ.7ರಷ್ಟು ಇತ್ತು. ಆದರೆ ಇದೀಗ ಅದು 4.4ಕ್ಕೆ ಇಳಿಕೆಯಾಗಿದೆ ಎಂದು ಹೇಳಿದೆ. ಇನ್ನು ಜಾಗತಿಕವಾಗಿ ಕೊರೋನಾ ವೈರಸ್ ಮರಣ ಪ್ರಮಾಣ ಶೇ.6.93ರಷ್ಟಿದ್ದು, ಭಾರತದಲ್ಲಿ 3.16ರಷ್ಟಿದೆ ಎಂದು ಹೇಳಲಾಗಿದೆ.
ಇನ್ನು ಗರಿಷ್ಠ ಸೋಂಕು ಪ್ರಕರಣಗಳ ಪಟ್ಟಿಯಲ್ಲಿ ಮಹಾರಾಷ್ಟ್ರ ಅಗ್ರ ಸ್ಥಾನದಲ್ಲಿದ್ದು, ಈ ವರೆಗೂ ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 6,817ಕ್ಕೆ ಏರಿಕೆಯಾಗಿದೆ. ಬಳಿಕ ಗುಜರಾತ್ (2,815), ದೆಹಲಿ (2,514), ರಾಜಸ್ಥಾನ (2,034), ಮಧ್ಯಪ್ರದೇಶ (1,952) ಮತ್ತು ಉತ್ತರ ಪ್ರದೇಶ (1,778), ತಮಿಳುನಾಡಿನಲ್ಲಿ 1,755, ಆಂಧ್ರಪ್ರದೇಶದಲ್ಲಿ 1,061 ಮತ್ತು ತೆಲಂಗಾಣದಲ್ಲಿ 984, ಪಶ್ಚಿಮ ಬಂಗಾಳದಲ್ಲಿ 571, ಕರ್ನಾಟಕದಲ್ಲಿ 489, ಜಮ್ಮು ಮತ್ತು ಕಾಶ್ಮೀರದಲ್ಲಿ 454, ಕೇರಳದಲ್ಲಿ 451, ಪಂಜಾಬ್‌ನಲ್ಲಿ 298 ಮತ್ತು ಹರಿಯಾಣದಲ್ಲಿ 272, ಬಿಹಾರದಲ್ಲಿ 228, ಒಡಿಶಾದಲ್ಲಿ 94, ಜಾರ್ಖಂಡ್ ನಲ್ಲಿ 59, ಉತ್ತರಾಖಂಡದಲ್ಲಿ 48, ಹಿಮಾಚಲ ಪ್ರದೇಶದಲ್ಲಿ 40, ಛತ್ತೀಸ್ ಘಡ ಮತ್ತು ಅಸ್ಸಾಂನಲ್ಲಿ ತಲಾ 36 ಪಾಸಿಟಿವ್ ಪ್ರಕರಣಗಳಿವೆ. ಇದಲ್ಲದೆ ಚಂಡೀಘಡದಲ್ಲಿ 28, ಅಂಡಮಾನ್ ಮತ್ತು ನಿಕೋಬಾರ್ ನಲ್ಲಿ 27, ಲಡಾಖ್ ನಲ್ಲಿ 20, ಮೇಘಾಲಯದಲ್ಲಿ 12, ಗೋವಾ ಮತ್ತು ಪುದುಚೇರಿಯಲ್ಲಿ ತಲಾ 7 ಸೋಂಕು ಪ್ರಕರಣಗಳಿವೆ. ಮಣಿಪುರ ಮತ್ತು ತ್ರಿಪುರಾದಲ್ಲಿ ತಲಾ ಎರಡು ಪ್ರಕರಣಗಳು ಮಾತ್ರ ಇವೆ, ಮೆಜೋರಾಂ ಮತ್ತು ಅರುಣಾಚಲ ಪ್ರದೇಶದಲ್ಲಿ ತಲಾ ಒಂದು ಪ್ರಕರಣಗಳಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


